ಸಹಸ್ರಾರು ವಿದ್ಯಾರ್ಥಿಗಳಿಂದ ವಿಘ್ನನಿವಾರಕನಿಗೆ ವಿಶೇಷ ಪೂಜೆ

23 hkr 02- CHANDRAYANA
Published on

ಹಿರೇಕೆರೂರ: ಭಾರತದ ಚಂದ್ರಯಾನ- 3 ಯೋಜನೆ ಯಶಸ್ವಿಯಾಗಲಿ ಎಂದು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತದ ವತಿಯಿಂದ ನಡೆಯುತ್ತಿರುವ ವಿವಿಧ ಶಾಲಾ- ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಘ್ನ ವಿನಾಶಕನ ಪೂಜೆ ಮಾಡುವುದರೊಂದಿಗೆ ಪ್ರಾರ್ಥಿಸಿದರು.


ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಮಾತನಾಡಿ, ವಿಶ್ವವೇ ಇಂದು ಭಾರತದ ಸಾಧನೆಯನ್ನು ಎದುರು ನೋಡಲು ಕಾತರಿಸುತ್ತಿದೆ. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ- 3 ಇಂದು ಚಂದ್ರಚುಂಬನ ಮಾಡಲು ಕ್ಷಣಗಣನೆಯಲ್ಲಿದೆ. ಈ ಸಾಧನೆಯ ಸಂಭ್ರಮದ ಯಶಸ್ವಿಗಾಗಿ ಭಾರತೀಯ 140 ಕೋಟಿ ಜನ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಈ ಚಂದ್ರಯಾನ ಚಂದ್ರನ ಅಂಗಳದಲ್ಲಿ ಯಶಸ್ವಿಯಾದರೆ ಇಡೀ ವಿಶ್ವದಲ್ಲಿಯೇ ಭಾರತವನ್ನು ಎಲ್ಲ ದೇಶಗಳು ಬೆರಗುಗಣ್ಣಿನಿಂದ ನೋಡುತ್ತವೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಭಗವಂತ ಯಾವ ವಿಘ್ನಗಳಿಲ್ಲದೆ ಯಶಸ್ವಿಯಾಗಲಿ ಎಂಬುದು ಭಾರತೀಯರೆಲ್ಲರ ಬಯಕೆಯಾಗಿದೆ ಎಂದರು.


ಮುಖ್ಯಶಿಕ್ಷಕರಾದ ಕೆ.ಎಂ. ಸುಕುಕುಮಾರ, ಆರ್.ಎಂ. ಪೂಜಾರ, ಕೆ.ಆರ್. ಲಮಾಣಿ, ಬಿ.ವಿ. ಸನ್ನೇರ, ಶಿಕ್ಷಕರಾದ ಆರ್.ಎಚ್.ಬೆಟ್ಟಳ್ಳೇರ, ಪಿ.ಎಂ. ಡಮ್ಮಳ್ಳಿ, ಎಂ.ವಿ. ಕಡದಕಟ್ಟಿ, ಕೆ.ಎಚ್. ಮಾವೀನತೋಪ, ರೇಖಾ ನೆಲವಾಲದ, ತನುಜಾ ಉಪ್ಪಾರ ಹಾಗೂ ಸಹಸ್ರಾರು ವಿದ್ಯಾರ್ಥಿಗಳು ಇದ್ದರು. ದೈಹಿಕ ಶಿಕ್ಷಕ ರಾಜು ಕರೇಗೌಡ್ರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net