

ನರಗುಂದ: ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿಯಿಂದ ನರಗುಂದಕ್ಕೆ ಆಗಮಿಸಿದ ಆಮಂತ್ರಣ ಅಕ್ಷತೆಯನ್ನು ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ ಮಾತನಾಡಿ, ಅಯೋಧ್ಯೆಯಲ್ಲಿ ನಿರ್ವಿುಸಲಾದ ರಾಮಮಂದಿರದಲ್ಲಿ ಜ. 22ರಂದು ಭಗವಾನ್ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ನಡೆಯಲಿದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ಈ ದೇವತಾ ಕಾರ್ಯದಲ್ಲಿ ದೇಶದ ಎಲ್ಲರನ್ನೂ ಸೇರಿಸಿಕೊಳ್ಳಲು ತೀರ್ವನಿಸಿದ್ದು, ಅದರಂತೆ ಶ್ರೀ ರಾಮ ಜನ್ಮಭೂಮಿ ಆಮಂತ್ರಣ ಅಕ್ಷತೆ ನರಗುಂದಕ್ಕೆ ಆಗಮಿಸಿರುವುದು ನಮ್ಮೆಲ್ಲರ ಸುದೈವ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಂಜು ಮೆಣಸಗಿ, ಪುರಸಭೆ ಸದಸ್ಯರಾದ ರಾಚನಗೌಡ ಪಾಟೀಲ, ದೇವಣ್ಣ ಕಲಾಲ, ಬಿಜೆಪಿ ಮುಖಂಡ ಬಸು ಪಾಟೀಲ, ಮಂಜು ಬೆಳಗಾವಿ, ಶಂಕರಗೌಡ ಪಾಟೀಲ, ಸಂತೋಷ ಹಂಚಿನಾಳ, ಸಂಗು ಕಂಠಿ, ಮಹಾಂತೇಶ ಹಂಪನ್ನವರ, ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿದ್ದೇಶ ಹೂಗಾರ, ಮುತ್ತು ಹೂಗಾರ, ಶಿವು ಅಂಗಡಿ, ರವಿ ಹೊಂಗಲ, ಬಸವರಾಜ ಹುಲಕುಂದ, ಪ್ರಕಾಶ ಕಂಠಿ, ಎನ್.ವಿ. ಮೇಟಿ, ಸಂಘ ಪರಿವಾರ, ವಿಶ್ವ ಹಿಂದು ಪರಿಷತ್ ನರಗುಂದ ತಾಲೂಕು ಘಟಕದ ಸದಸ್ಯರು ಇದ್ದರು.