ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜೆ

ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜೆ
Published on

ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ದೇವಾಲಯಗಳಲ್ಲಿ ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಆರ್‌ಎಂಸಿ ಚೆಕ್‌ಪೋಸ್ಟ್ ಬಳಿಯ ಶ್ರೀಸತ್ಯ ಸಾಯಿ ಅನಾಥ ಆಶ್ರಮದಲ್ಲಿ ಗುರುವಾರ ಬೆಳಗ್ಗೆೆಯಿಂದಲೇ ಶ್ರೀಸತ್ಯ ಸಾಯಿ ಅವರ ಅಮೃತ ಶಿಲೆಗೆ ವಿಶೇಷ ಹೂವಿನ ಅಲಂಕಾರ ನೆರವೇರಿಸಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಭಕ್ತರು ಭಕ್ತಿ ಗೀತೆ, ಭಜನೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಪಟ್ಟಣದ ಗಂಜಾಂ ರಸ್ತೆಯ ಶಿರಡಿ ಸಾಯಿ ಮಂದಿರದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ಹಳೇ ಅಂಚೆಕಚೇರಿ ರಸ್ತೆಯ ಶ್ರೀಗುರು ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅರ್ಚಕ ಬದ್ರೀನಾಥ್ ನೇತೃತ್ವದಲ್ಲಿ ವಿಶೇಷ ಪೂಜಾ ಪ್ರಾರ್ಥನೆ ನೆರವೇರಿತು.

ತಾಲೂಕಿನ ಕೂಡಲಕುಪ್ಪೆ ಗ್ರಾಮದ ಶ್ರೀಶಿರಡಿಸಾಯಿ ಬಾಬಾ ಮಂದಿರಲ್ಲಿ ಅರ್ಚಕ ಗೌತಮ್ ನೇತೃತ್ವದಲ್ಲಿ ಅಲಂಕಾರ, ಪೂಜೆ, ಪ್ರಸಾದ ವಿನಿಯೋಗ ನೆರವೇರಿತು.

ಟಿ.ಎಂ.ಹೊಸೂರು ಗೇಟ್ ಬಳಿಯ ಶ್ರೀ ಮಹಾಕಾಳಿ ದೇವಾಲಯದಲ್ಲಿ ಶಕ್ತಿದೇವತೆಗೆ ಭಕ್ತರು ಪೂಜೆಸಲ್ಲಿಸಿ ಪೀಠಾಧಿಪತಿ ಶ್ರೀ ಗುರುದೇವ ಅವರಿಗೆ ಪುಷ್ಪಾರ್ಚನೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net