ಮಳೆಗಾಗಿ ವಿಶೇಷ ಪೂಜೆ

ಮಳೆಗಾಗಿ ವಿಶೇಷ ಪೂಜೆ
Published on

ಸೋಮವಾರಪೇಟೆ: ವೀರಶೈವ ಸಮಾಜ ಹಾಗೂ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಪಟ್ಟಣದ ಮಹದೇಶ್ವರ ಬ್ಲಾಕ್‌ನಲ್ಲಿರುವ ಮಳೆ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.

ಪೂಜಾ ಕೈಂಕರ್ಯಗಳು ವಿರಕ್ತ ಮಠಾಧೀಶರಾದ ಶ್ರೀ ನಿಶ್ಚಲದೇಶೀಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದವು. ಅರ್ಚಕ ಮೋಹನ್‌ಮೂರ್ತಿ ಶಾಸ್ತ್ರಿ, ವಿರೂಪಾಕ್ಷ ಪೂಜೆ ನೆರವೇರಿಸಿದರು. ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಕೆ.ಎನ್. ಶಿವಕುಮಾರ್, ಕೆ.ಎನ್. ತೇಜಸ್ವಿ, ಎ.ಎಸ್. ಮಲ್ಲೇಶ್, ಯುವರಾಜ್, ಯೋಗೇಶ್ ಸೇರಿದಂತೆ ಸಮಾಜದ ಬಾಂಧವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಚಿತ್ರ2ಎಸ್‌ಪಿಟಿ6: ಸೋಮವಾರಪೇಟೆ ವೀರಶೈವ ಸಮಾಜ ಹಾಗೂ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಪಟ್ಟಣದ ಮಹದೇಶ್ವರ ಬ್ಲಾಕ್‌ನಲ್ಲಿರುವ ಮಳೆ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ನಿಶ್ಚಲದೇಶೀಕೇಂದ್ರ ಸ್ವಾಮೀಜಿ, ಮೋಹನ್‌ಶಾಸ್ತ್ರಿ, ಶಿವಕುಮಾರ್, ಮೃತ್ಯುಂಜಯ, ತೇಜಸ್ವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net