ವೀರಾಂಜನೇಯ ದೇಗುಲದಲ್ಲಿ ವಿಶೇಷ ಪೂಜೆ

DEC. 24, HNP., PH.1
ಹೊಳೆನರಸೀಪುರ ಪಟ್ಟಣದ ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ಜರುಗಿತು. ಗೋವಿಂದರಾಜು, ಎಚ್.ಜಿ.ವೆಂಕಟೇಶ್, ನಾಗೇಂದ್ರಸ್ವಾಮಿ ಇದ್ದರು.
Published on

ಹೊಳೆನರಸೀಪುರ: ಹನುಮ ಜಯಂತಿ ಪ್ರಯುಕ್ತ ಪಟ್ಟಣದ ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ಭಾನುವಾರ ಮುಂಜಾನೆ ಸುಪ್ರಭಾತ, ನಿರ್ಮಾಲ್ಯ, ಪಂಚಾಮೃತ ಅಭಿಷೇಕ, ಫಲಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು. ನಂತರ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥಪ್ರಸಾದ ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಹಿರಿಯ ಅರ್ಚಕರಾದ ಎಚ್.ವಿ.ಸುಜಯ್ ಆಚಾರ್ ಹಾಗೂ ಶ್ರೀನಿವಾಸ ಆಚಾರ್ ಪೂಜಾ ಕೈಂಕರ್ಯ ನೆರವೇರಿಸಿದರು. ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಉಪಾಧ್ಯಕ್ಷ ಎಚ್.ಎನ್.ರವೀಂದ್ರ, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಪಿ.ಶಂಕರ, ಪುರಸಭಾ ಸದಸ್ಯೆ ಸಾವಿತ್ರಿ, ಹಿರಿಯರಾದ ಗೋವಿಂದರಾಜು, ನಾಗೇಂದ್ರಸ್ವಾಮಿ, ಡಾ. ಜಗದೀಶ್, ರಾಧಮ್ಮ, ರೂಪಾ ಹರೀಶ್, ಜಯಶ್ರೀ ಜಗನ್ನಾಥ್, ರಾಘವೇಂದ್ರ, ಆನಂದ, ನರಸಿಂಹ, ಕಾವ್ಯಶ್ರೀ ಕೃಷ್ಣ, ರಾಮು, ಶ್ರೀನಿವಾಸ, ವೈರಮುಡಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net