

ಬೈಂದೂರು: ಶಿರೂರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜ.10ರಂದು ವೈಕುಂಠ ಏಕಾದಶಿ ಪ್ರಯುಕ್ತ ಉತ್ತರ ದಿಕ್ಕಿನ ವೈಕುಂಠ ದ್ವಾರದ ಮೂಲಕ ಭಕ್ತರಿಗೆ ದೇವರ ದರ್ಶನ ದೊರೆಯಲಿದೆ. ಉಷಃಕಾಲ 5.45ಕ್ಕೆ ದರ್ಶನ ಹಾಗೂ ವಿಷೇಶ ಪೂಜೆ ಪ್ರಾರಂಭವಾಗಲಿದೆ. ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರವರೆಗೆ ವಿವಿಧ ಭಜನಾ ತಂಡಗಳಿಂದ ಅಖಂಡ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ ತಿಳಿಸಿದ್ದಾರೆ.