ಯುವಕರಲ್ಲಿ ದೇಶಭಕ್ತಿ ಭಾವ ಮೂಡಿಸುವ ಪ್ರಯತ್ನ

book
Published on

ಬೈಂದೂರು: ಭಾರತೀಯ ಸೇನೆ ತನ್ನಲ್ಲಿಗೆ ಬರುವ ಯುವಕರಲ್ಲಿ ದೇಶಭಕ್ತಿ ಭಾವ ಮೂಡಿಸುವ ಪ್ರಯತ್ನ ಮಾಡುತ್ತದೆ. ಅಂತಹ ಅತ್ಯುತ್ತಮ ತರಬೇತಿ ವ್ಯವಸ್ಥೆ ಸೇನೆಯಲ್ಲಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

ನಾಗೂರಿನಲ್ಲಿ ಭಾನುವಾರ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ರಚಿಸಿದ ಕಂಟೋನ್ಮೆಂಟ್ ಕಥೆಗಳು ಎಂಬ ಕಥಾಸಂಕಲನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೇಡಿಯೋ ಕುಂದಾಪ್ರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕೃತಿ ಪರಿಚಯಿಸಿದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಶುಭಹಾರೈಸಿದರು. ಸಾಹಿತಿ ಬೈಂದೂರು ಚಂದ್ರಶೇಖರ ನಾವಡ ವಂದಿಸಿದರು.

ಇಂದಿನ ಕಾಲಘಟ್ಟದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ. ನಾವು ನಿಶ್ಚಿಂತೆಯಿಂದ ಸುಂದರ ಬದುಕು ಕಾಣಲು, ತಮ್ಮ ಜೀವದ ಹಂಗು ತೊರೆದು ನಮ್ಮನ್ನು ಹಾಗೂ ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ನೆನಪು ಯಾರಿಗೂ ಆಗದಿರುವುದು ಬೇಸರದ ಸಂಗತಿ. -ಆನಂದ ಮದ್ದೋಡಿ ಅಧ್ಯಕ್ಷರು ಸುರಭಿ ಬೈಂದೂರು https://www.vijayavani.net/physical-health-leads-to-a-good-personality https://www.vijayavani.net/only-through-hard-work-can-one-achieve-greatness

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net