ಉಪ್ಪಿನಂಗಡಿಯಲ್ಲಿ ಮೋದಿ ಹುಟ್ಟುಹಬ್ಬಕ್ಕೆ ವಿಶೇಷ ಪ್ರಾರ್ಥನೆ : ಶಾಂತಿನಗರದಲ್ಲಿ ವಿಶೇಷ ಪೂಜೆ

pooje
Published on

ಉಪ್ಪಿನಂಗಡಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿಯ ಉಪ್ಪಿನಂಗಡಿ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳೀ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು.

ಬಿಜೆಪಿ ಮುಂದಾಳುಗಳಾದ ಸುರೇಶ್ ಅತ್ರಮಜಲು, ಸುನೀಲ್ ದಡ್ಡು, ಚಂದಪ್ಪ ಮೂಲ್ಯ, ವಿದ್ಯಾಧರ ಜೈನ್, ಮುಕುಂದ್ ಅಬಜತ್ತೂರು, ಜಯಂತ ಪೊರೋಳಿ, ಉಮೇಶ್ ಶೆಣೈ, ಪ್ರಸಾದ್ ಭಂಡಾರಿ, ಧನಂಜಯ ನಟ್ಟಿಬೈಲ್, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಉಷಾಚಂದ್ರ ಮುಳಿಯ, ವನಿತಾ, ಚಿದಾನಂದ ಪಂಚೇರು, ರಾಜೇಶ್ ಕೊಡಂಗೆ, ಗೋಪಾಲ ಬೆತ್ತೋಡಿ, ಲೋಕೇಶ್ ಜೈನ್, ಸದಾನಂದ ಪೂಜಾರಿ, ರಮೇಶ್, ಜನಾರ್ದನ ಮರಿಕೆ ಮೊದಲಾದವರು ಉಪಸ್ಥಿತರಿದ್ದರು.

34 ನೆಕ್ಕಿಲಾಡಿಯ ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ, ಪ್ರಾರ್ಥನೆ ನೆರವೇರಿಸಲಾಯಿತು.

ಬಿಜೆಪಿಯ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎನ್., ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ರಾಜೇಶ್ ಶಾಂತಿನಗರ, 34 ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ರೈ ಅಲಿಮಾರ್, ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ರಮೇಶ್ ಸುಭಾಷ್‌ನಗರ, ರತ್ನಾವತಿ, ವಿಜಯಕುಮಾರ್, ಪಕ್ಷದ ಪ್ರಮುಖರಾದ ಸದಾನಂದ ನೆಕ್ಕಿಲಾಡಿ, ಬಾಲಕೃಷ್ಣ ಚೌಟ, ವಿಶ್ವನಾಥ, ಸಂದೀಪ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net