ಕುಕ್ಕೆ ದೇವಳದಿಂದ ವಿಪತ್ತು ನಿರ್ವಹಣಾ ಕಾರ್ಯಪಡೆ : ಸುಬ್ರಹ್ಮಣ್ಯ ಗ್ರಾಮ ಮತ್ತು ಭಕ್ತರಿಗೆ ತುರ್ತು ಸಂದರ್ಭಕ್ಕೆ ವಿಶೇಷ ಯೋಜನೆ

kukke
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ.
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆಗಾಲದಲ್ಲಿ ಕುಮಾರಧಾರಾ ಭಾರಿ ಹರಿವಿನೊಂದಿಗೆ ಹರಿಯುತ್ತದೆ. ಇಂತಹ ಸಂದರ್ಭ ಮತ್ತು ಮಳೆಗಾಲದಲ್ಲಿನ ತುರ್ತು ಸಂದರ್ಭಗಳಲ್ಲಿ ರಕ್ಷಣೆಗಾಗಿ ದೇವಸ್ಥಾನದಿಂದ ವಿಪತ್ತು ನಿರ್ವಹಣಾ ಕಾರ್ಯಪಡೆ ರಚಿಸಲಾಗಿದೆ. ಗುರುವಾರದಿಂದ ಈ ಕಾರ್ಯಪಡೆ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಕುಕ್ಕೆ ಗ್ರಾಮಸ್ಥರು ಮತ್ತು ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಸದಾ ಸನ್ನದ್ಧ : ಕಾರ್ಯಪಡೆ ದಿನದ 24 ಗಂಟೆ ಸನ್ನದ್ಧವಾಗಿರುತ್ತದೆ. ತುರ್ತು ಅವಶ್ಯಕ ಸಾಮಗ್ರಿಗಳು ಸೇರಿ ರಕ್ಷಣೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ದೇವಳದಿಂದ ಕಾರ್ಯಪಡೆಗೆ ನೀಡಲಾಗಿದೆ. ತುರ್ತು ಸಂದರ್ಭ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ವಿಪತ್ತು ನಿರ್ವಹಣಾ ಕಾರ್ಯಪಡೆ ಮೇಲುಸ್ತುವಾರಿ ಸಮಿತಿಯಲ್ಲಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ(9448381600), ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ(9446163590), ಸೌಮ್ಯಾ ಭರತ್(9448918125), ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ(9481564099), ಸತೀಶ್ ಕೂಜುಗೋಡು(9449103511), ಪವನ್ ಎಂ.ಡಿ.(83108002480), ದೇವಳದ ಎಇಒ ಎಸ್.ಜೆ.ಯೇಸುರಾಜ್(9019424450) ಉಸ್ತುವಾರಿ ಅಧಿಕಾರಿಗಳಾಗಿದ್ದಾರೆ. ಇಂಜಿನಿಯರ್ ಉದಯಕುಮಾರ್(9448548559) ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

ವಿವಿಧ ಜವಾಬ್ದಾರಿಗಳು

ಆರೋಗ್ಯ ನಿರೀಕ್ಷಕ ಯೋಗೀಶ್ ಎಂ.(9945991860)- ಬ್ಲೀಚಿಂಗ್ ಪೌಡರ್ ಸಿಂಪಡಣೆ ಮತ್ತು ಮೆಟ್ಟಿಲುಗಳಲ್ಲಿ ಜಾರುವಿಕೆ ತಡೆಯಲು ವ್ಯವಸ್ಥೆ ಮಾಡುವುದು. ಧನಂಜಯ ಬಿ.(9964218916)- ವಿದ್ಯುತ್ ಕಾರ್ಯ ನಿರ್ವಹಣೆ, ಬೀದಿದೀಪದ ನಿರ್ವಹಣೆ, ದೇವಣ್ಣ ಗೌಡ ಬಿ.(9483287772) ಮತ್ತು ದಾಮೋದರ ದೇವರಗದ್ದೆ(9483350009) ಕೆಸರು ತೆಗೆಯುವಿಕೆ ಮತ್ತು ಮರಗಳು ಬಿದ್ದಲ್ಲಿ ಅವುಗಳ ತೆರವು ಕಾರ್ಯ ನಡೆಸುವುದು. ದೇವಳದ ಪಾಟಾಳಿ ಎ.ಆರ್.ಲೋಕೇಶ್(9741504616) ತುರ್ತು ಸಂದರ್ಭ ರಕ್ಷಣೆಗೆ ಪಂಚಪರ್ವ ಸಿಬ್ಬಂದಿ ನಿಯೋಜನೆ ಮಾಡುವ ಕಾರ್ಯ, ಲಾರಿ ಚಾಲಕ ಶಂಕರಪ್ಪ(9483815305), ಕ್ಯಾಂಪರ್ ಚಾಲಕ ಮಂಜುನಾಥ(9611309216), ಟ್ರಾೃಕ್ಟರ್ ಚಾಲಕ ನಾಗೇಶ್ ಸಂಪ್ಯಾಡಿ(9945193026), ಸೆಕ್ಯೂರಿಟಿ ಮೇಲ್ವಿಚಾರಕ ದಾಮೋದರ ನಾಯರ್(7349220392) ಮತ್ತು ಸೂಪರ್‌ವೈಸರ್ ಕಾರ್ತಿಕ್(9845675655) ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವುದು. ಷಣ್ಮುಖ ಪ್ರಸಾದ ಭೋಜನಾ ಶಾಲಾ ಮುಖ್ಯಸ್ಥ ದಿನೇಶ್ ಎಂ.ಆರ್.(9448548583) ಅಗತ್ಯ ಸಂದರ್ಭದಲ್ಲಿ ಉಪಾಹಾರ ವ್ಯವಸ್ಥೆ. ಅಗತ್ಯ ಸಂದರ್ಭಗಳಲ್ಲಿ ಸಾರ್ವಜನಿಕರು ಮತ್ತು ಭಕ್ತರು ಸದುಪಯೋಗ ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net