ಮಾಯಾ ಜುಮಾದಿ ಯಕ್ಷಗಾನ ಶೀರ್ಷಿಕೆ ಬಿಡುಗಡೆ

New Project (12)
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾಯಾ ಜುಮಾದಿ ಪ್ರಸಂಗದ ಶೀರ್ಷಿಕೆಯನ್ನು ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಬಿಡುಗಡೆಗೊಳಿಸಿದರು.

ಕ್ಷೇತ್ರದ ಯಕ್ಷಗಾನ ಮೇಳ ಪ್ರಧಾನ ಸಂಚಾಲಕ ಪ್ರಶಾಂತ್ ಪೂಜಾರಿ ಮಸ್ಕತ್ ಮಾತನಾಡಿ, ಇದೊಂದು ಬಾಲೆ ಮಾಣಿ ಮಾಯಂದಾಲ್ ಪಾರ್ದನ ಆಧಾರಿತ ಸತ್ಯ ಕಥೆಯಾಗಿದ್ದು, 2025-26ನೇ ಸಾಲಿನ ತಿರುಗಾಟದಲ್ಲಿ ಸಂಚಲನ ಮೂಡಿಸಲಿದೆ ಎಂದರು.

ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೌರವಾಧ್ಯಕ್ಷ ಜಯಂತ್ ನಡುಬೈಲ್, ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್, ಕೋಶಾಧಿಕಾರಿ ಮೋಹನ್‌ದಾಸ್ ವಾಮಂಜೂರ್, ಜತೆ ಕಾರ್ಯದರ್ಶಿ ಜೈ ವಿಕ್ರಂ ಕಲ್ಲಾಪು, ಸುಜಿತ ವಿ.ಬಂಗೇರ, ಪ್ರಮಲ್ ಕುಮಾರ್ ಕಾರ್ಕಳ, ಸಂಜೀವ ಪೂಜಾರಿ, ನವೀನ್ ಸುವರ್ಣ ಸಜೀಪ, ಡಾ.ಸಂತೋಷ್ ಪರಂಪಲ್ಲಿ ಉಡುಪಿ, ಹರೀಶ್ ಕೆ.ಪೂಜಾರಿ ನಾರಾಯಣ ಮಚ್ಚಿನ, ಕಾನೂನು ಸಲಹೆಗಾರ ನವನೀತ್ ಡಿ.ಹಿಂಗಾಣಿ, ಹರೀಶ್ ವಿ.ಪಚನಾಡಿ, ನಿತ್ಯಾನಂದ ನಾವರ, ಜಯರಾಮ ಬಂಗೇರ, ನಾಗೇಶ್ ಪೂಜಾರಿ, ಶಾಂಭವಿ ಬಂಗೇರ, ದೀಪಕ್ ಸಜೀಪ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net