ಅಂಗವಿಕಲರ ವಿಶೇಷ ಸಭೆ, ಚಕ್ ವಿತರಣೆ

special
Published on

ಕೋಟ: ಕೋಟ ಗ್ರಾಪಂ 2024-25ನೇ ಸಾಲಿನ ಅಂಗವಿಕಲರಿಗೆ ಕಾಯ್ದಿರಿಸಿದ ಅನುದಾನದ ಸಹಾಯಧನ ವಿತರಣೆ, ವಿಶೇಷ ಸಭೆ ಮಾಹಿತಿ ಕಾರ್ಯಕ್ರಮ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.

ಜಿಲ್ಲಾ ಮನೋತಜ್ಞ ವೈಶಾಕ್ ಅಂಗವಿಕಲರಿಗೆ ಸಂಬಂಧಿಸಿದ ಮಾನಸಿಕ ಹಾಗೂ ದೈಹಿಕ ವಿಷಯ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪಿಡಿಒ ಸುರೇಶ್ ಬಂಗೇರ ಪಂಚಾಯಿತಿಯಲ್ಲಿ ಅಂಗವಿಕಲರಿಗೆ ಶೇ.5 ಅನುದಾನದಲ್ಲಿ 1,20,000 ರೂ. ಆರ್ಥಿಕ ಸಹಾಯಧನದ 43 ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ಒಟ್ಟು 92,000 ರೂ.ಗಳ ಪ್ರಥಮ ಹಂತದ ನೆರವು ನೀಡುವ ಮಾಹಿತಿ ತಿಳಿಸಿದರು.

ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಸದಸ್ಯರಾದ ಶಿವರಾಮ ಶೆಟ್ಟಿ, ಜಯಂತಿ ಪೂಜಾರಿ, ಗುಲಾಬಿ ಪೂಜಾರಿ, ವಿಶೇಷಚೇತನರ ಸಂಯೋಜಕ ಅಬುಬಕ್ಕರ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಶೇಖರ್ ಮರವಂತೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net