ಮರಪಾಲ ಹಾಡಿಯಲ್ಲಿ ವಿಶೇಷ ಉಪನ್ಯಾಸ

ಮರಪಾಲ ಹಾಡಿಯಲ್ಲಿ ವಿಶೇಷ ಉಪನ್ಯಾಸ
Published on

ಗೋಣಿಕೊಪ್ಪಲು: ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಎಸ್ಸಿ, ಎಸ್ಟಿ ಸಮಿತಿಯ ವತಿಯಿಂದ ನಮ್ಮ ನಡಿಗೆ ಸಮುದಾಯದ ಕಡೆಗೆ ಶೀರ್ಷಿಕೆಯಡಿಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿಯ ಮರಪಾಲ ಹಾಡಿಯಲ್ಲಿ ಹಾಡಿ ಜನರಿಗಾಗಿ ವಿಶೇಷ ಉಪನ್ಯಾಸ, ಹಾಡಿ ಭೇಟಿ ಮತ್ತು ಜಾಗೃತಿ ಕಾರ್ಯಕ್ರಮ ಮಂಗಳವಾರ ಮರಪಾಲ ಅಂಗನವಾಡಿಯಲ್ಲಿ ನಡೆಯಿತು.

ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಪಿ.ಸಿ.ರಾಮು ಕಾರ್ಯಕ್ರಮ ಉದ್ಘಾಟಿಸಿ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.

ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರಘುರಾಜ್ ಸಮುದಾಯದ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ. ದಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮರಪಾಲ ಹಾಡಿಯ ಅಧ್ಯಕ್ಷ ರಾಜು, ಸುಬ್ಬು, ಧನ್ಯಾ, ಉಪನ್ಯಾಸಕಿ ಸುಮ್ಮಯ್ಯ ತಬಾಸಂ, ಮರಪಾಲ ಅಂಗನವಾಡಿ ಶಿಕ್ಷಕಿ ಮಲ್ಲಿಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net