ರೇಡಿಯೋ ಆಲಿಸುವ ಅಭ್ಯಾಸ ರೂಢಿಸಿ : ಲತೀಶ್ ಪಾಲ್ದಾನೆ ಕಿವಿಮಾತು

New Project (27)
Published on

ಮೂಡುಬಿದಿರೆ: ರೇಡಿಯೋವು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮಹಿಳಾ ಸಬಲೀಕರಣದ ಕುರಿತ ಮಾಹಿತಿಗೆ ಪ್ರಮುಖ ಸಾಧನವಾಗಿದೆ. ಸರಳ ಭಾಷೆಯಲ್ಲಿ ಪರಿಚಾರಕರಿಂದ ಪ್ರಸಾರ ಮಾಡುವ ವಾಹಿತಿ, ಸಾರ್ವಜನಿಕರಿಗೆ ನೇರವಾಗಿ ತಲುಪುತ್ತಿದೆ. ರೇಡಿಯೋ ಸ್ಥಳೀಯ ಸಮುದಾಯದ ಅರ್ಥಪೂರ್ಣ ಅಗತ್ಯಗಳಿಗೆ ಸ್ಪಂದಿಸಿ, ಸ್ಥಳೀಯ ವಿಷಯ, ಭಾಷೆ, ಮತ್ತು ಸಂಸ್ಕೃತಿಯ ಪ್ರಾತಿನಿಧ್ಯ ನೀಡುತ್ತಿದೆ ಎಂದು ಮಂಗಳೂರು ಆಕಾಶವಾಣಿ ಪ್ರಸರಣ ಕಾರ್ಯನಿರ್ವಾಹಕ ಲತೀಶ್ ಪಾಲ್ದಾನೆ ನುಡಿದರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬುಧವಾರ ಆಳ್ವಾಸ್‌ನ ಜೆಎಂಸಿ ಹಾಲ್‌ನಲ್ಲಿ ನಡೆದ ಡಿಜಿಟಲ್ ಯುಗದಲ್ಲಿ ರೇಡಿಯೋ ಅವಕಾಶಗಳು ಹಾಗೂ ಸವಾಲುಗಳು ಕುರಿತು ಮಾತನಾಡಿದರು. ಆಕಾಶವಾಣಿಯಂತಹ ಸರ್ಕಾರಿ ಸಂಸ್ಥೆಗಳಲ್ಲಿ ನ್ಯೂಸ್ ಎಡಿಟರ್, ಸುದ್ದಿ ನಿರೂಪಕ, ಉದ್ಘೋಷಕ, ಕ್ಯಾಶುಯಲ್ ಅನೌನ್ಸರ್ ಮುಖೇನ ವಿವಿಧ ಹುದ್ದೆಗಳಲ್ಲಿ ಗುರುತಿಸಿಕೊಳ್ಳಲು ಅವಕಾಶವಿದೆ. ರೇಡಿಯೋ ಮೂಲಕ ಅನೇಕ ಹೊಸ ಪ್ರತಿಭೆಗಳ ಅನಾವರಣಗೊಂಡಿವೆ. ಆಕಾಶವಾಣಿಯಲ್ಲಿ ವತ್ತಿ ಆರಂಭಿಸಿ, ನಂತರ ವಿವಿಧ ವಾಧ್ಯಮಗಳಲ್ಲಿ ಪ್ರಸಿದ್ಧಿ ಪಡೆದವರು ಸಾಕಷ್ಟು ಜನರಿದ್ದಾರೆ. ಮೊದಲು ವಿದ್ಯಾರ್ಥಿಗಳು ರೇಡಿಯೋವನ್ನು ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಸುಶ್ಮಿತಾ ಜೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕಿ ವೀಕ್ಷಿತಾ ವಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net