

ಮೂಡುಬಿದಿರೆ: ಶಿಕ್ಷಣ ಮತ್ತು ರಂಗಕಲೆಗಳನ್ನು ಪ್ರತ್ಯೇಕಿಸಿ ನೋಡುವ ಇತ್ತೀಚಿನ ಪ್ರವೃತ್ತಿ ಸಮಾಜಕ್ಕೆ ಒಳಿತಲ್ಲ. ಅರಿವು ಮತ್ತು ಆನಂದ ಬೇರ್ಪಡಿಸಲಾಗದ ನಿಜವಾದ ಸಂಪತ್ತು. ಕಲೆಯು ಶಿಕ್ಷಣದಿಂದ ದೂರವಿದ್ದರೆ, ಮಾನವೀಯತೆ, ಸೃಜನಶೀಲತೆ ಮತ್ತು ಜೀವನದ ಗಾಢತೆ ಕುಂದುತ್ತದೆ ಎಂದು ರಂಗ ನಿರ್ದೇಶಕ, ಸಾಹಿತಿ ಡಾ.ಶ್ರೀಪಾದ ಭಟ್ ಕುಮಟಾ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಂಗ ಸಂಸ್ಕೃತಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನರಾಂ ಸುಳ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು. ಡಾ.ಯೋಗೀಶ ಕೈರೋಡಿ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಜ್ಯೋತಿ ರೈ ವಂದಿಸಿದರು. ಸೌಮ್ಯ ಕುಂದರ್ ವಂದಿಸಿದರು. ಮ್ಯೂಸಿಕ್ ಫೋರಂನ ವಿದ್ಯಾರ್ಥಿಗಳು ಹಾಡಿದರು.