ಮೋದಿಗೆ ಅಡಕೆ ಪೇಟ, ಅಡಕೆ ಹಾರ

Modi_Adike_peta
Published on

ತುಮಕೂರು: ತೆಂಗು-ಕಂಗಿನ ಬೀಡು ಕಲ್ಪತರು ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಫೆ.6 ರಂದು ಆಗಮಿಸಲಿದ್ದಾರೆ. ಈ ವೇಳೆ ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಜಗತ್ತಿನ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್‌ಎಎಲ್ ಘಟಕವನ್ನು ಸೋಮವಾರ ಮಧ್ಯಾಹ್ನ 3.30ಕ್ಕೆ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದು ಅವರಿಗೆ ಜಿಲ್ಲೆಯ ಜನತೆ ಪರವಾಗಿ ವಿಶೇಷವಾಗಿ ಅಭಿನಂದಿಸಲಾಗುತ್ತಿದೆ.

ಮೋದಿ ಅವರು ಜಿಲ್ಲೆಗೆ ಕೊಟ್ಟ ಕೊಡುಗೆಗೆ ನಮ್ಮ ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲೊಂದಾದ ಅಡಕೆ ಗೋಟುಗಳಿಂದಲೇ ತಯಾರಿಸಿದ 300 ಗ್ರಾಂ ತೂಕದ ಅಡಕೆ ಪೇಟ ಹಾಗೂ 1.5 ಕೆ.ಜಿ., ತೂಕದ ಗುಂಡು ಅಡಕೆಯಿಂದ ನಿರ್ಮಿಸಿರುವ ಅಡಕೆ ಹಾರ ಜತೆಗೆ ಶಿವಕುಮಾರ ಶ್ರೀಗಳ ಪತ್ರಿಮೆಯನ್ನು ಮೋದಿ ಅವರಿಗೆ ನೀಡಿ ಜಿಲ್ಲಾಡಳಿತದಿಂದ ವಿಶೇಷವಾಗಿ ಅಭಿನಂದನೆಗಳನ್ನು ಜಿಲ್ಲೆಯ ಜನರ ಪರವಾಗಿ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಈ ಅಡಕೆ ಪೇಟ, ಅಡಕೆ ಹಾರವನ್ನು ಗುಬ್ಬಿ ತಾಲೂಕಿನ ಚಿಕ್ಕೋನಹಳ್ಳಿಪಾಳ್ಯದ ನಟರಾಜ್ ನಿರ್ಮಿಸಿದ್ದು ಪ್ರಧಾನಿ ಮೋದಿ ಅವರ ಶಿರವನ್ನು ಅಲಂಕರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net