ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

dks
Published on

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ, ಕಾಫಿ ಡೇ ಮಾಲೀಕರಾಗಿದ್ದ ದಿ. ಸಿದ್ದಾರ್ಥ ಪುತ್ರ ಅಮಾರ್ತ್ಯ ಹೆಗ್ಡೆಯ ವಿವಾಹ ಸಮಾರಂಭ ಕುಟುಂಬ, ಬಂಧು-ಬಳಗ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ, ಶಾಸ್ತ್ರೋಕ್ತವಾಗಿ ಪ್ರೇಮಿಗಳ ದಿನದಂದೇ ನೆರವೇರಿತು.

ಬೆಂಗಳೂರಿನ ವೈಟ್​ಫೀಲ್ಡ್ ಬಳಿಯ ರೆಸಾರ್ಟ್​ನಲ್ಲಿ ಮಗಳ ಮದುವೆಯನ್ನು ಬಹಳ ವಿಜೃಂಭಣೆಯಿಂದ ನೇರವೇರಿಸಿಕೊಟ್ಟ ಡಿಕೆಶಿ, ತನ್ನ ಪ್ರೀತಿಯ ಮಗಳ ಮದುವೆ ಪ್ರಯುಕ್ತ ಸ್ವಕ್ಷೇತ್ರದ ಜನತೆಗೆ ಭರ್ಜರಿ ಗಿಫ್ಟ್ ಕೂಡ ಕೊಟ್ಟಿದ್ದಾರೆ. ಕನಕಪುರ ಕ್ಷೇತ್ರದ ಲಕ್ಷಾಂತರ ಜನರಿಗೆ ಡಿ.ಕೆ.ಬ್ರದರ್ಸ್ ಕಡೆಯಿಂದ ಉಡುಗೊರೆ ತಲುಪಿದೆ. ಪ್ರತಿ ಗ್ರಾಮದ ಜನರಿಗೂ ಡಿಕೆಶಿ ಬೆಂಬಲಿಗರೇ ಖುದ್ದು ಅವುಗಳನ್ನು ಮನೆಮನೆಗಳಿಗೂ ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿರಿ PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!

ಕರೊನಾ ಇಲ್ಲದಿದ್ದರೆ ಕನಕಪುರದಲ್ಲಿಯೇ ಕ್ಷೇತ್ರದ ಜನರ ಸಮ್ಮುಖದಲ್ಲೇ ಅದ್ದೂರಿಯಾಗಿ ಮಗಳ ಮದುವೆ ಮಾಡಲು ಡಿಕೆಶಿ ಯೋಚಿಸಿದ್ದರು. ಆದರೆ, ಕರೊನಾ ಸೋಂಕಿನ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೆಸಾರ್ಟ್ ನಲ್ಲಿ ಮದುವೆ ಮಾಡಿದರು. ಆದರೆ, ತನ್ನ ಕ್ಷೇತ್ರದ ಜನತೆಗೆ ಮದುವೆ ಉಡುಗೊರೆ ರೂಪದಲ್ಲಿ ದುಬಾರಿ ಬೆಲೆಯ ಬಟ್ಟೆಗಳನ್ನು ತಲುಪಿಸಿದ್ದಾರೆ.

ಪುರುಷರಿಗೆ ರೇಡ್ ಆ್ಯಡ್ ಟೇಲರ್ ಕಂಪನಿಯ ಪ್ಯಾಂಟ್- ಶರ್ಟ್. ಮಹಿಳೆಯರಿಗೆ ಬನಾರಸ್ ಕಂಪನಿಯ ದುಬಾರಿ ಸೀರೆ, ಹಿರಿಯರಿಗೆ ಪಂಚೆ-ಶರ್ಟ್ ಕೂಡ ಕೊಡಲಾಗಿದೆ. ಕನಕಪುರ ತಾಲೂಕಿನಲ್ಲಿ 2.50 ಲಕ್ಷಕ್ಕೂ ಹೆಚ್ಚು ಜನರಿಗೆ ಮದುವೆ ಉಡುಗೊರೆ ತಲುಪಿದೆ ಎನ್ನಲಾಗಿದೆ. ತಲಾ ಒಂದು ಸೀರೆ ಬೆಲೆ 3500-5000, ತಲಾ ಒಂದುಜೊತೆ ಪ್ಯಾಂಟ್-ಶರ್ಟ್ ಬೆಲೆ 3000-4500 ರೂಪಾಯಿ ಎಂದು ಹೇಳಲಾಗುತ್ತಿದೆ. ಮಗಳ ಮದುವೆಗೆ ಕೋಟ್ಯಂತರ ಖರ್ಚು ಮಾಡಿ ಕ್ಷೇತ್ರದ ಜನರಿಗೆ ಡಿಕೆಶಿ ಉಡುಗೊರೆ ನೀಡಿದ್ದರಾದರೂ ಅದನ್ನು ಹಂಚಿಕೆ ಮಾಡುವಾಗ ಕೆಲವರನ್ನು ಬಿಡಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net