ಆಷಾಢ ಮಾಸದ ದಿನಗಳೇವಿಶೇಷ

kota (3)
Published on

ಕೋಟ: ಆಗಿನ ಕಾಲಘಟ್ಟದ ಆಷಾಢ ದಿನಗಳನ್ನು ನೆನಪಿನ ಬುತ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ. ಆ ದಿನಗಳು ಅಷ್ಟು ಮಹತ್ವ ಪಡೆದುಕೊಂಡಿದ್ದವು ಎಂದು ನಿವೃತ್ತ ಪ್ರಾಂಶುಪಾಲ ಸಿ.ಸುರೇಶ್ ತುಂಗ ಅಭಿಪ್ರಾಯಪಟ್ಟರು.

ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ವತಿಯಿಂದ ಸಂಘದ ಅಧ್ಯಕ್ಷೆ ವನೀತಾ ಎಂ.ಉಪಾಧ್ಯಾಯ ಮನೆಯ ವಠಾರದಲ್ಲಿ ಆಯೋಜಿಸಿದ್ದ ಆಷಾಢ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವಿಧ ಬಗೆಯ ಆರೋಗ್ಯ ಪೂರ್ಣ ತಿಂಡಿ ತಿನಿಸುಗಳ ಭೋಜನ ಏರ್ಪಡಿಸಲಾಗಿತ್ತು. ವಲಯ ಗೌರವಾಧ್ಯಕ್ಷೆ ಜ್ಞಾಹ್ನವಿ ಹೇರ್ಳೆ ಉಪಸ್ಥಿತರಿದ್ದರು.

ಇದೇ ವೇಳೆ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಪತ್ರವನ್ನು ಸುಜಾತ ಬಾಯರಿ ವಾಚಿಸಿದರು. ಕಾರ್ಯದರ್ಶಿ ಸ್ಮಿತಾರಾಣಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net