ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಏ.21ರಿಂದ ಜೂ.4ರವರೆಗೆ ವಿಶೇಷ ಲಸಿಕಾ ಅಭಿಯಾನದಡಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗ ತಡೆಗಟ್ಟುವ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರೈತರಲ್ಲಿ ಮನವಿ ವಾಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಚಾರಿ ಪಶುಚಿಕಿತ್ಸಾ ಟಕ ವಾಹನಗಳ ತ್ರೈವಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ 45 ದಿನ ಹಮ್ಮಿಕೊಂಂಡಿದ್ದು ಜಾನುವಾರುಗಳಿಗೆ ಅರೋಗ್ಯದ ಸಮಸ್ಯೆ ಕಂಡುಬಂದಲ್ಲಿ ಪಶು ಸಹಾಯವಾಣಿ ಸಂಖ್ಯೆ 1962ಕ್ಕೆ ಕರೆ ವಾಡಿ, ಅಗತ್ಯ ಮಾಹಿತಿಯೊಂದಿಗೆ ಹೆಸರು ನೋಂದಾಯಿಸಿಕೊಂಡು, ಸಂಚಾರಿ ತುರ್ತು ಪಶು ಚಿಕಿತ್ಸಾಲಯದ ಆಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದರು.
ಜಾನುವಾರುಗಳಿಗೆ ಹೆರಿಗೆ ಸಮಸ್ಯೆ, ಮೈ ಹೊರಬೀಳುವುದು, ಹೊಟ್ಟೆ ಉಬ್ಬರ, ವಿಷಪ್ರಾಶನ (ಕೀಟನಾಶಕ/ಕಳೆನಾಶಕ ಸೇವನೆ), ಕಾಲು ಮುರಿತ, ಮೇಲೆ ಏಳಲು ಆಗದಿರುವುದು (ನೆಲ ಕಚ್ಚುವುದು) ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಶ್ರೀವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿ 8 ಸಂಚಾರಿ ಪಶುಚಿಕಿತ್ಸಾ ಟಕಗಳ ಸೇವೆ ಒದಗಿಸುತ್ತಿದ್ದು 2025ನೇ ಸಾಲಿನ ಜನವರಿಯಿಂದ ವಾರ್ಚ್‌ವರೆಗೆ 3243 ಜಾನುವಾರುಗಳಿಗೆ ಚಿಕಿತ್ಸೆ ಸಿಕ್ಕಿದೆ ಎಂದರು.
ಉಚಿತ ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗದ ಲಸಿಕಾ ಅಭಿಯಾನದ ಕರಪತ್ರ ಮತ್ತು ಪಶುವೈದ್ಯಕೀಯ ಉಚಿತ ತುರ್ತು ಚಿಕಿತ್ಸೆ 1962 ಸಹಾಯವಾಣಿಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ರಂಗಪ್ಪ, ವೈದ್ಯರಾದ ಡಾ. ಜುಬೆರ್ ಗಿರಗನವ್, ಡಾ. ಜ್ಞಾನೇಶ್, ನಗರಸಭೆಯ ಹಿರಿಯ ಅರೋಗ್ಯ ನಿರೀಕ್ಷಕಿ ಜಿ.ಜಿ.ರೇಖಾ ಮತ್ತಿತರರು ಇದ್ದರು.