ಗುಬ್ಬಚ್ಚಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ

FotoJet
Published on

 ಚನ್ನಪಟ್ಟಣ : ದಶವಾರ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಗುರುವಾರ ವಿಶ್ವ ಗುಬ್ಬಚ್ಚಿ ದಿನವನ್ನು ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವ ಮೂಲಕ ಆಚರಿಸಲಾಯಿತು.

ಗ್ರಂಥಾಲಯ ಮೇಲ್ವಿಚಾರಕ ಡಿ ಸಿ.ಶಿವಲಿಂಗಯ್ಯ ಮಾತನಾಡಿ, ಗುಬ್ಬಚ್ಚಿಗಳು ನಮ್ಮ ಮನೆಯ ಸುತ್ತಲಿನ ಪರಿಸರದಲ್ಲಿ ಗೂಡು ಕಟ್ಟಿಕೊಂಡು ಚಿಲಿಪಿಲಿ ಶಬ್ಧ ಮಾಡುವ ಸುಂದರ ಪಕ್ಷಿಗಳಾಗಿದ್ದು, ಪುಟಾಣಿ ಮಕ್ಕಳಿಗೆ ಇವು ತುಂಬಾ ಇಷ್ಟವಾಗುತ್ತವೆ. ಅಳಿವಿನಂಚಿನಲ್ಲಿರುವ ಇಂತಹ ಪಕ್ಷಿ ಸಂಕುಲವನ್ನು ರಕ್ಷಣೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.

ಗ್ರಾಪಂ ಪಿಡಿಒ ಸಿದ್ದರಾಮ ಯರಗಲ್ ಮಾತನಾಡಿ, ಮಕ್ಕಳ ವ್ಯಕ್ತಿತ್ವ ಬೆಳವಣಿಗೆ ಹಾಗೂ ಜ್ಞಾನ ವಿಸ್ತಾರದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಾಗಿದೆ. ಬೇಸಿಗೆ ರಜೆಯಲ್ಲೂ ಮಕ್ಕಳು ಗ್ರಂಥಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ತಮ್ಮ ಜ್ಞಾನ ಹೆಚ್ವಿಸಿಕೊಳ್ಳಲು ಸಲಹೆ ನೀಡಿದರು.

ಭಾಗವಹಿಸಿದ್ದ ಎಲ್ಲ ಮಕ್ಕಳು ಗುಬ್ಬಚ್ಚಿ ಚಿತ್ರ ಬಿಡಿಸುವುದರ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net