

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣ ಮತ್ತು ಪುರಚ್ಚಿ ತಲೈವರ್ ಡಾ.ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಡಬಲ್ ಡೆಕ್ಕರ್ ಎಕ್ಸ್ಪ್ರೆಸ್ (ಸಂಖ್ಯೆ 22626) ರೈಲಿನ ವೇಳಾಪಟ್ಟಿ ಪರಿಷ್ಕರಿಸಲು ದಣ ರೈಲ್ವೆಯು ಸೂಚಿಸಿದೆ.
ನೂತನ ವೇಳಾಪಟ್ಟಿ ಮೇ.1 ರಿಂದ ಅನ್ವಯವಾಗಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 1.30ಕ್ಕೆ ಕೆಎಸ್ಆರ್ ನಿಲ್ದಾಣದಿಂದ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ಸಂಜೆ 7.45ಕ್ಕೆ ತಲುಪಲಿದೆ.
ಬೆಂಗಳೂರಿನಿಂದ ಮಧ್ಯಾಹ್ನ 1:30ಕ್ಕೆ ರೈಲು ಹೊರಡಲಿದೆ. ಮಧ್ಯದಲ್ಲಿ ಈ ರೈಲು ಬೆಂಗಳೂರಿನ ಕಂಟೋನ್ಮೆಂಟ್ (1:40/1:42PM), ಕೃಷ್ಣರಾಜಪುರಂ (1:52/1:54PM), ಬಂಗಾರಪೇಟೆ (2:34/2:35PM), ಕುಪ್ಪಂ (3:2/3:3PM), ಜೋಲಾರಪೆಟ್ಟೈ (4:15/4:20PM), ವನ್ನಿಯಂಬಾಡಿ (4:34/4:36PM), ಅಂಬೂರು (4:48/4:50 PM), ಕಟಪಾಡಿ (5:43/5:45PM), ಅರಕ್ಕೋಣಂ (6:28/6:30 PM), ಪೆರಂಬೂರ್ (7:13/7:15PM) ಈ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಡಾ.ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ಸಂಜೆ 7:45ಕ್ಕೆ ತಲುಪಲಿದೆ.