ಆತ್ಮಚಿಂತನೆಗೆ ಸಾಧನವಾಗಿದೆ ವ್ರತ

ಬಸವಲಿಂಗ ಸ್ವಾಮೀಜಿ
ಬಸವಲಿಂಗ ಸ್ವಾಮೀಜಿ
Published on

ಕುರುಗೋಡು: ಧ್ಯಾನ ಮತ್ತು ಆಧ್ಯಾತ್ಮಿಕತೆಯೇ ಮೌನವ್ರತವಾಗಿದ್ದು, ವ್ರತದ ಮೂಲಕ ಆತ್ಮಶುದ್ಧಿ ಹಾಗೂ ಭಕ್ತರ ಏಳಿಗೆಗೆ ಶ್ರಮಿಸುವುದು ಸ್ವಾಮೀಜಿಗಳ ಕರ್ತವ್ಯವಾಗಿದೆ ಎಂದು ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.

ಸೋಮಸಮುದ್ರ ಗ್ರಾಮದ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ಧಲಿಂಗ ಸ್ವಾಮೀಜಿ ಮೌನ ಅನುಷ್ಠಾನ ಮಂಗಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಆತ್ಮಚಿಂತನೆ ಹಾಗೂ ಮೌನದ ಸಾಧನೆಗೆ ವ್ರತ ವಿಶಿಷ್ಟ ಸಾಧನವಾಗಿದೆ ಎಂದರು. ದರೂರು ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ಸ್ವಾಮೀಜಿ, ಶ್ರೀಧರಗಡ್ಡೆ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾ ವಿರಕ್ತಮಠದ ಮರಿಕೊಟ್ಟೂರು ದೇಶಿಕರು, ಶಿವಲಿಂಗಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net