ಸರ್ಕಾರಿ ಶಾಲೆ ಎದುರೇ ವಾಮಾಚಾರ; ಗ್ರಾಮಸ್ಥರು, ಶಿಕ್ಷಕರಲ್ಲಿ ಆತಂಕ..

School 1
Published on

ಬಾಗಲಕೋಟೆ: ಸರ್ಕಾರಿ ಶಾಲೆಯೊಂದರ ಮುಂದೆ ವಾಮಾಚಾರ ಮಾಡಿರುವುದು ಈಗ ಸುತ್ತಮುತ್ತಲ ಹಳ್ಳಿಗಳ ಜನರ ನೆಮ್ಮದಿ ಕೆಡಿಸಿದ್ದು, ಶಾಲೆ ಶಿಕ್ಷಕರು ಕೂಡ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಇಳಕಲ್ ತಾಲೂಕಿನ ಎಸ್.ಬಿ. ಗೋನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟ್ ಮುಂದೆಯೇ ಈ ವಾಮಾಚಾರ ಮಾಡಲಾಗಿದೆ. ಮುಚ್ಚಿದ ಗೇಟ್ ಮುಂದೆ ಗೊಂಬೆಗಳು, ಕುಂಕುಮ, ಲಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ನಡೆಸಲಾಗಿದೆ.

ವಾಮಾಚಾರಕ್ಕೆ ಇಟ್ಟ ವಸ್ತುಗಳನ್ನ ಕಂಡು ಭಯಭೀತರಾದ ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಇಳಕಲ್ ಗ್ರಾಮೀಣ ಠಾಣೆಗೆ ದೂರು ನೀಡಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಮಾಚಾರ ನಡೆಸಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕ ಸಂಗಮೇಶ ಹಾಗೂ ಸಹ ಶಿಕ್ಷಕರು, ಗ್ರಾಮಸ್ಥರು, ಎಸ್​​ಡಿಎಂಸಿ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net