ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಕುಟುಂಬಕ್ಕೆ ಸೋನು ಸೂದ್ ಕಡೆಯಿಂದ ಬಂತು ವಿಶೇಷ ಗಿಫ್ಟ್​!

Sonu sood'
Published on

ಯಾದಗಿರಿ: ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ಪದ್ಮಾ ನಾಗರಾಜ ಮಕ್ಕಳಿಗೆ ಬಾಲಿವುಡ್ ನಟ ಸೋನು ಸೂದ್ ಬುಧವಾರ ಮುಂಬೈಯಿಂದ ಅಮೆಜಾನ್​ ಮೂಲಕ ಬೇಬಿ ಕಿಟ್​ಗಳನ್ನು ಕಳುಹಿಸಿದ್ದಾರೆ.

ಕಿಟ್​​ನಲ್ಲಿ ಮಕ್ಕಳ ಸೋಪ್, ಎಣ್ಣೆ, ಶಾಂಪು, ಪೌಡರ್ ಹಾಗೂ ಇನ್ನಿತರ ವಸ್ತುಗಳು ಇವೆ. ಕಳೆದ ಎರಡು‌ ದಿನಗಳ ಹಿಂದೆ ಬಡ ಕುಟುಂಬಕ್ಕೆ ಮೂರು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಕಳುಹಿಸಿದ್ದರು.

ಇದರ ಜತೆಗೆ ಬರುವ ದಿನಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ಆ ಬಡ ಕುಟಮಬಕ್ಕೆ ಸಹಾಯ ಮಾಡುವ ಮೂಲಕ ಮಾನವಿಯತೆ ಮೆರದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net