38ರ ಪ್ರಾಯದ ಮಗನನ್ನೇ ಬರ್ಬರವಾಗಿ ಕೊಂದ ಪಾಪಿತಂದೆ!

murder
Published on

ಚಿಕ್ಕೋಡಿ: ತಂದೆಯಿಂದಲೇ 38ರ ಪ್ರಾಯದ ಮಗ ಕೊಲೆಯಾಗಿದ್ದು, ಈ ಭೀಕರ ದೃಶ್ಯ ಕಂಡ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ರಾಯಭಾಗ ತಾಲೂಕಿನ ಖಣದಾಳ ಗ್ರಾಮದ ತೋಟದ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಅಲಗೌಡ ಅಜೂರೆ(38) ಮೃತ ದುರ್ದೈವಿ. ಕೊಲೆ ಆರೋಪಿ 80 ವರ್ಷದ ಚನ್ನಪ್ಪ ಅಜೂರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಯೋವೃದ್ಧ ಕಾಲದಲ್ಲಿ ಆಸರೆಯಾಗಬೇಕಿದ್ದ ಹೆತ್ತ ಮಗನನ್ನೇ ಕೊಡಲಿ ಮತ್ತು ಕಲ್ಲಿಂದ ಜಜ್ಜಿ ಚನ್ನಪ್ಪ ಕೊಂದಿದ್ದಾರೆ. ಇಂತಹ ಕೃತ್ಯವೆಸಗಲು ಆಸ್ತಿ ವಿವಾದವೇ ಕಾರಣ ಎನ್ನಲಾಗಿದೆ.

ತಂದೆ-ಮಗನ ನಡುವೆ ಆಸ್ತಿ ವಿಚಾರಕ್ಕೆ ಜಗಳ ಆಗುತ್ತಿತ್ತು. ಈ ವಿಚಾರವಾಗಿ ಕುಪಿತಗೊಂಡಿದ್ದ ತಂದೆಯು ಮಲಗಿದ್ದ ಮಗನನ್ನೇ ಹೆಣವಾಗಿಸಿದ್ದಾನೆ ಎಂದು ಗೊತ್ತಾಗಿದೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net