

ಕೊಟ್ಟೂರು: ಸಿರಿಗೆರೆ ಮಠ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ ಸಾದು ವೀರಶೈವ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಬಿ.ಸಿ.ಮೂಗಪ್ಪ ತಿಳಿಸಿದರು.
ಇದನ್ನೂ ಓದಿ: ವೀರಶೈವ ಸಮಾಜದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಿ
ಶ್ರೀಮಠದಿಂದ ಬದುಕು ರೂಪಿಸಿಕೊಂಡ ಸಾದು ವೀರಶೈವ ಸಮಾಜದ ಕೆಲವರು, ವಾಮಮಾರ್ಗವಾಗಿ ಪಡೆಯುತ್ತಿದ್ದ ಸೌಲಭ್ಯಗಳಿಗೆ ಶ್ರೀಗಳು ಕಡಿವಾಣ ಹಾಕಿದ್ದು, ಇದನ್ನು ಸಹಿಸದೆ ಆರೋಪ ಮಾಡುತ್ತಿದ್ದಾರೆ.
ಸಾದು ಸಮಾಜದ ಎಲ್ಲ ಭಕ್ತರು ಮಠದ ಸೇವಕರು. ಇಲ್ಲಿ ಯಾರೂ ಮುಖಂಡರಿಲ್ಲ. ಕೆಲವರು ಶ್ರೀಗಳ ಆಪ್ತತತೆಯನ್ನು ದುರುಪಯೋಗ ಪಡಿಸಿಕೊಂಡು ಮಠದ ಘನತೆ, ಗೌರವಕ್ಕೆ ಚ್ಯುತಿ ತರುತ್ತಿದ್ದು, ಅವರನ್ನು ಭಕ್ತರು ಎನ್ನಲಾಗುವುದಿಲ್ಲ ಎಂದು ಶ್ರೀಗಳು ತಿಳಿಸಿರುವುದಾಗಿ ಡಾ.ಮೂಗಪ್ಪ ಅವರು ವಿಜಯವಾಣಿಗೆ ತಿಳಿಸಿದರು.
ಮಠದ ಹೆಸರನ್ನು ದುರ್ಬಳಕೆ ಮಾಡಿಕೊಂಡವರನ್ನು ಹೊರ ಹಾಕಲಾಗಿದೆ. ಹೀಗಾಗಿ ಆರೋಪ, ಗುಂಪುಗಾರಿಕೆ ಮಾಡುತ್ತಿದ್ದಾರೆ. ಮಠದ ಭಕ್ತರು ಇಂತಹವರಿಗೆ ಕವಡೆ ಕಿಮ್ಮತ್ತು ಕೊಡಲ್ಲ.
ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಮಾಡಿದ ಸವಿ ನೆನಪಿಗಾಗಿ ಎರಡು ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ಕಟ್ಟಲು ಶ್ರೀಗಳು ಆದೇಶ ನೀಡಿದ್ದು, ಜಾಗಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಕೊಟ್ಟೂರು ಕೆರೆಗೆ ನೀರು ತುಂಬಿಸಲು ಡಿಪಿಆರ್ ಮಾಡಿಸಲು ಸೂಚಿಸಲಾಗಿದೆ. ಕೆರೆಗೆ ನೀರು ತುಂಬಿಸುವ ಯೋಚನೆಯಿಂದ ಮಠವೆಂದು ಹಿಂದೆ ಸರಿಯುವುದಿಲ್ಲ ಎಂದರು.