

ತುಮಕೂರು: ಶುಕ್ರವಾರ ವರಮಹಾಲಕ್ಷಿ$್ಮ ಹಬ್ಬದ ಹಿನ್ನೆಲೆಯಲ್ಲಿ ಸೋಮಣ್ಣರ ನವೀಕೃತ ಜನಸಂಪರ್ಕ ಕಾರ್ಯಾಲಯದಲ್ಲಿ ವಿಶೇಷ ಪೂಜೆಗಳೊಂದಿಗೆ "ಗೃಹಪ್ರವೇಶ' ನೆರವೇರಿಸಲಾಯಿತು. ಬೆಳಗಿನಿಂದಲೇ ವಿಶೇಷ ಪೂಜೆ ಕೈಗೊಂಡು, ಲಕ್ಷಿ$್ಮ ಪೂಜೆ ಸಹ ಮಾಡಲಾಯಿತು.
ಅಲ್ಲದೆ, ಹೋವಹವನ ನೆರವೇರಿಸಿ ಹಾಲು ಉಕ್ಕಿಸಿ ಅಧಿಕೃತವಾಗಿ ಗೃಹ ಪ್ರವೇಶಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ದಂಪತಿ ಸಮೇತ ಹೋಮದಲ್ಲಿ ಭಾಗಿಯಾದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಹ ವಿಶೇಷ ಪೂಜೆ ನೆರವೇರಿಸಿದರು.
ಸಚಿವ ಸೋಮಣ್ಣರ ಹಿಂಬಾಲಕರು ಈ ಸಂಭ್ರಮದಲ್ಲಿದ್ದಾಗಲೇ ಜಿಲ್ಲಾಧಿಕಾರಿ ಶುಭಕಲ್ಯಾಣ್ ಶಾಕಿಂಗ್ ಪತ್ರ ಹೊರಬಿದ್ದಿದೆ. ಪಿಡಬ್ಲೂಡಿ ಪ್ರಧಾನ ಕಾರ್ಯದರ್ಶಿ ಪತ್ರ ಲಗತ್ತಿಸಿ ಸಕ್ಯೂರ್ಟ್ ಹೌಸ್ ಕಟ್ಟಡವನ್ನು ಕಚೇರಿ ಉಪಯೋಗಕ್ಕೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಪಿಡಬ್ಲೂಡಿ ತುಮಕೂರು ವಿಭಾಗದ ಇಇಗೆ ಪತ್ರ ಬರೆದಿರುವುದು ಬಿಜೆಪಿ&ಜೆಡಿಎಸ್ ಮುಖಂಡರನ್ನು ಕೆರಳಿಸಿದೆ.