ಧಮ್​ ಇದ್ದರೆ ವಾಪಸ್​ ಪಡೆಯಲಿ

Somanna_Office_02
Published on

ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣನವರ ಅಭಿವೃದ್ಧಿ ಕಾರ್ಯ, ಅವರ ಜನಪರ ಕೆಲಸಗಳ ವೇಗಕ್ಕೆ ಕಾಂಗ್ರೆಸ್​ ನಾಯಕರಿಗೆ ನಡುಕು ಉಂಟಾಗಿದೆ. ಸೋಮಣ್ಣರ ವೇಗಕ್ಕೆ ಬ್ರೇಕ್​ ಹಾಕಲು ಕಚೇರಿ ಹಿಂಪಡೆಯುವ ಕುತಂತ್ರ ಮಾಡುತ್ತಿದ್ದಾರೆ, ಧಮ್​ ಇದ್ದರೆ ಕಚೇರಿಯನ್ನು ಹಿಂಪಡೆಯಲಿ ನೋಡೋಣ, ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ಎಚ್ಚರಿಕೆ ನೀಡಿದರು.

ಮೈಸೂರಿನ ಐಬಿಯಲ್ಲಿ ಮೂವರು ಶಾಸಕರ ಕಚೇರಿಗೆ ಅವಕಾಶ ನೀಡಲಾಗಿದೆ. ಇದು ಸಹಜ ಪ್ರಕ್ರಿಯೆ. ಅದೇರೀತಿ ತುಮಕೂರು ಐಬಿಯಲ್ಲಿ ಕೇಂದ್ರ ಸಚಿವರಿಗೆ ಕಚೇರಿಗೆ ಸ್ಥಳಾವಕಾಶ ಮಾಡಲಾಗಿದೆ. ಆದರೆ, ಕೇಂದ್ರ ಸಚಿವರ ಕಚೇರಿ ವಿಚಾರದಲ್ಲಿ ಕಾಂಗ್ರೆಸ್​ ನಾಯಕರು ಕೆಟ್ಟ ರಾಜಕಾರಣ ಮಾಡಲು ಹೊರಟಿದ್ದಾರೆ, ಯಾವ ಕಾರಣಕ್ಕೂ ನಾವು ಇದನ್ನು ಸಹಿಸುವುದಿಲ್ಲ, ಕಚೇರಿಯನ್ನೂ ವಾಪಸ್​ ನೀಡುವುದಿಲ್ಲ ಎಂದರು.

ಜನಸಂಪರ್ಕ ಕಚೇರಿ ಆರಂಭಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಆ.3ರಂದು ಅನುಮೋದನೆ ನೀಡಿತ್ತು. ಅಂದಿನಿಂದಲೇ ಸಚಿವರ ಕಚೇರಿ ಕೆಲಸಕಾರ್ಯಗಳು ಇಲ್ಲಿ ಪ್ರಾರಂಭವಾಗಿವೆ. ಆದರೆ, ಶುಕ್ರವಾರ ರಾಜ್ಯ ಸರ್ಕಾರ ಸಚಿವರ ಕಚೇರಿಗೆ ನೀಡಿದ್ದ ಕಟ್ಟಡದ ಅನುಮೋದನೆಯನ್ನು ಹಿಂಪಡೆದಿರುವುದು ಖಂಡನೀಯ. ಕಟ್ಟಡವನ್ನು ಹಿಂಪಡೆಯುವ ಪ್ರಯತ್ನದ ಮೂಲಕ ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಈಗಾಗಲೇ ಸೋಮಣ್ಣರ ಕಚೇರಿಯಲ್ಲಿ ಇಲಾಖೆ ಕೆಲಸ, ಸಾರ್ವಜನಿಕರ ಕೆಲಸಕಾರ್ಯಗಳು ಆರಂಭವಾಗಿದ್ದು ಯಾವುದೇ ಕಾರಣಕ್ಕೂ ಕಚೇರಿಯನ್ನು ವಾಪಸ್​ ನೀಡುವುದಿಲ್ಲ. ಸರ್ಕಾರ ಯಾವ ರೀತಿ ವಾಪಸ್​ ಪಡೆಯುವುದೋ ನಾವು ನೋಡುತ್ತೇವೆ ಜಿ.ಬಿ.ಜ್ಯೋತಿಗಣೇಶ್​ ನಗರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net