

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ಏ.1, ಶಿವಕುಮಾರ ಶ್ರೀಗಳ ಜನ್ಮದಿನದಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ವಿ.ಸೋಮಣ್ಣ ಬುಧವಾರ 3 ಸೆಟ್ ನಾಮಪತ್ರ ಸಲ್ಲಿಸಿದರು.
ಈ ವೇಳೆ ಬಿಜೆಪಿ-ಜೆಡಿಎಸ್ ಭರ್ಜರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿತಲ್ಲದೆ ಉಭಯಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿದವು. ಪೊಲೀಸರೊಂದಿಗಿನ ಸಣ್ಣಪುಟ್ಟ ಮಾತಿನಚಕಮಕಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದ ಸೋಮಣ್ಣ ಮಧ್ಯಾಹ್ನ 2.11ಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಸಿಎಂಗಳಾದ ಬಿಎಸ್‌ವೈ, ಎಚ್ಡಿಕೆ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಜಿ.ಎಸ್.ಬಸವರಾಜು ಸಾಥ್ ನೀಡಿದರು. ಇದರ ಜತೆಯಲ್ಲಿ ಇನ್ನೆರಡು ಸೆಟ್ ನಾಮಪತ್ರಗಳನ್ನು ಸೋಮಣ್ಣ ಸಲ್ಲಿಸಿದರು.
ಮತ್ತೊಮ್ಮೆ ಮೋದಿ: ನಗರದ ಬಿ.ಎಚ್.ರಸ್ತೆಯ ವಿನಾಯಕ ನಗರದ ಗಣಪತಿ ದೇವಸ್ಥಾನ (ಅರ್ಧನಾರೀಶ್ವರ)ದಲ್ಲಿ ಬೆಳಗ್ಗೆ 11ಕ್ಕೆ ಪೂಜೆ 3 ಸೆಟ್ ನಾಮಪತ್ರಗಳೊಂದಿಗೆ ಪೂಜೆಸಲ್ಲಿಸಿದ ಬಳಿಕ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಜತೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಜನಾರ್ದನರೆಡ್ಡಿ, ಶಾಸಕರಾದಬಿ.ಸುರೇಶಗೌಡ, ಸಿ.ಬಿ.ಸುರೇಶ್‌ಬಾಬು, ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಸೊಗಡುಶಿವಣ್ಣ, ಮಸಾಲಜಯರಾಂ, ಕೆ.ಎಂ.ತಿಮ್ಮರಾಯಪ್ಪ, ಎಂ.ವಿ.ವೀರಭದ್ರಯ್ಯ ಪ್ರಚಾರ ರಥವೇರಿದರು.
ಎರಡೂ ಪಕ್ಷಗಳ ಸಹಸ್ರಾರು ಸಂಖ್ಯೆಯ ಬೆಂಬಲಿಗರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಉದ್ದಕ್ಕೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷಗಳ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದರು. ಮೋದಿ, ಮೋದಿ ಜಯಘೋಷದ ಜತೆಗೆ ‘ಮತ್ತೊಮ್ಮೆ ಮೋದಿ’ ಹರ್ಷೋದ್ಗಾರದೊಂದಿಗೆ ಮೆರವಣಿಗೆ ಸಾಗಿತು. ಕಾಲ್‌ಟೆಕ್ಸ್ ವೃತ್ತಕ್ಕು ಮುನ್ನ ಮಾಜಿ ಬಿ.ಎಸ್.ಯಡಿಯೂರಪ್ಪ ಮೆರವಣಿಗೆ ಕೂಡಿಕೊಂಡರು. ಈ ವೇಳೆ ಜಯಘೋಷಗಳು ಮೊಳಗಿದವು. ಬೆಳಗ್ಗೆ 11.30ಕ್ಕೆ ಗಣಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ತಲುಪುವ ಹೊತ್ತಿಗೆ 2 ಗಂಟೆ ಆಗಿತ್ತು. ಎರಡೂ ಪಕ್ಷಗಳ ಬೆಂಬಲಿಗರ ಮಹಾಸಾಗರವೇ ಕಂಡುಬಂದಿತು.
ರಾಮಮಂದಿರ ಕಟ್ಟಲಿಕ್ಕೆ 100 ವರ್ಷ ಆಯಿತು. ಯಾರಿಂದಲೂ ಕಟ್ಟಲಿಕ್ಕೆ ಆಗಲಿಲ್ಲ, ಮೋದಿನೇ ಬರಬೇಕಾಯಿತು. ಕಾಶ್ಮೀರವನ್ನೇ ಬಿಟ್ಟುಕೊಟ್ಟಿದ್ದರು ಕಾಂಗ್ರೆಸ್ಸಿಗರು. ಮೋದಿ ನಮ್ಮದಾಗಿಸಿಕೊಂಡರು. ಮೋದಿಗೆ ಸರಿಸಮನಾಗಿ ರಾಹುಲ್‌ಗಾಂಧಿಗೆ ನಿಲ್ಲಲಿಕ್ಕೆ ಆಗುತ್ತಾ? ಯಾವಾಗ ವಿದೇಶಕ್ಕೆ ಹಾರಿಹೋಗುತ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ. ಮಂಡ್ಯದಲ್ಲಿ ಹನುಮಧ್ವಜ ಕಿತ್ತುಹಾಕಿದ ಕಾಂಗ್ರೆಸ್ ಅನ್ನು ಕಿತ್ತೊಗೆಯೋ ಕೆಲಸ ಮಾಡಬೇಕು. ಆರ್.ಅಶೋಕ್ ವಿಪಕ್ಷ ನಾಯಕ ನಾಮಪತ್ರ ಸಲ್ಲಿಸುವ ವೇಳೆ ಸೇರಿದ್ದ ಜನಸ್ತೋಮ ಹೆಚ್ಚು ಜವಾಬ್ದಾರಿ ತಂದುಕೊಟ್ಟಿದೆ. ಜನತೆ ನನ್ನ ಮೇಲೆ ಅಪಾರ ವಿಶ್ವಾಸ, ನಿರೀಕ್ಷೆ ಇಟ್ಟಿದ್ದು ಆ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಮುಂದಿನ ದಿನಗಳು ನನ್ನ ಪಾಲಿಗೆ ಮುಳ್ಳಿಗೆ ಹಾಸಿಗೆಯಂತಿರಲಿದೆ. ಇನ್ನುಳಿದ 23 ದಿನಗಳು ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳ ಮೂಲೆ ಮೂಲೆ ಸುತ್ತಾಡಿ ಮತಯಾಚನೆ ಮಾಡುತ್ತೇನೆ. ಯಡಿಯೂರಪ್ಪ, ಕುಮಾರಸ್ವಾಮಿ, ಆರ್.ಅಶೋಕ್ ಸೇರಿ ಉಭಯ ಪಕ್ಷಗಳ ಮುಖಂಡರು ಬಂದಿದ್ದು ನನಗೆ ಆನೆ ಬಲ ಬಂದಾಂತಾಗಿದೆ. ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ ರೋಡ್ ಶೋ ಉಸ್ತುವಾರಿ ಹೊತ್ತಿದ್ದ ಜ್ಯೋತಿಗಣೇಶ್ ರೋಡ್ ಶೋ ಉಸ್ತುವಾರಿಯನ್ನು ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಹೊತ್ತಿದ್ದರು. ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಮೆರವಣಿಗೆಯನ್ನು ವಿನ್ಯಾಸಗೊಳಿಸಿದ್ದರು. ಉಭಯಪಕ್ಷಗಳ ಪ್ರಮುಖ ಮುಖಂಡರನ್ನು ಚುನಾವಣಾ ರಥದಲ್ಲಿರುವಂತೆ ನೋಡಿಕೊಂಡು ಸಮನ್ವಯತೆ ಸಾಧಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಎಸ್.ಡಿ.ದಿಲೀಪ್ ಕುಮಾರ್, ಕೆ.ಟಿ.ಶಾಂತಕುಮಾರ್ ಪ್ರಮುಖ ಮುಖಂಡರು ಹಾಜರಿದ್ದರು.