ಗ್ರಾಪಂ ಅಧ್ಯಕ್ಷರಾಗಿ ಸೋಮಣ್ಣ ಅವಿರೋಧ ಆಯ್ಕೆ

SRP_14-01jpj
Published on

ಶ್ರೀರಂಗಪಟ್ಟಣ: ತಾಲೂಕಿನ ಮುಂಡುಗದೊರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಎಂ.ಎಂ.ಸೋಮಣ್ಣ ಅವಿರೋಧ ಆಯ್ಕೆಯಾದರು.


ಗುರುವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಎಂ.ಎಂ.ಸೋಮಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಗೆ 5 ಜನ ಸದಸ್ಯರು ಗೈರಾಗಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸೋಮಣ್ಣ ಜತೆಗೆ 12 ಜನ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರಿಂದ ಚುನಾವಣಾಧಿಕಾರಿಯೂ ಆದ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಕೃಷ್ಣೇಗೌಡ ಅವಿರೋಧ ಆಯ್ಕೆ ಘೋಷಿಸಿದರು.


ಉಪಾಧ್ಯಕ್ಷೆ ಪಿ. ಸುಗುಣಾ, ಸದಸ್ಯರಾದ ಡಿ.ಕೆ.ನಾಗರಾಜು, ಸುನಂದಾ, ಪದ್ಮಾ, ಧನಂಜಯ, ಚುಂಚಶೆಟ್ಟಿ, ಬಿ.ಎನ್.ಗಾಯತ್ರಿ , ವಿ.ಮಹಾಲಕ್ಷ್ಮೀ, ಮಂಜುಳಾ, ವಿ.ಟಿ.ಗೋವಿಂದರಾಜು, ರಘುರಾಜ್, ಭವ್ಯಾ, ಪಿಡಿಒ ವಿಶಾಲಮೂರ್ತಿ, ಮುಡುಂಗದೊರೆ ಗ್ರಾಮದ ಮುಖಂಡರಾದ ಎಂ.ಎಂ.ಶಿವಣ್ಣ, ಸಿದ್ದೇಗೌಡ, ಮೋಹನ್, ಕಾಂಗ್ರೆಸ್ ಮುಖಂಡರಾದ ವಡಿಯಾಂಡಹಳ್ಳಿ ನಾಗರಾಜು, ಉದಯ್, ಚಿಕ್ಕಪಾಳ್ಯ ಮಹೇಂದ್ರ, ದೊಡ್ಡಪಾಳ್ಯ ಸೋಮೇಶ್, ಮಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net