ಸೋಮಣ್ಣ ಸಿಎಂ ಆಗಲಿ ಎಂದು ಆಶೀರ್ವದಿಸಿ!

SureshGowda_CM
Published on

ತುಮಕೂರು: ಜನ್ಮದಿನ ಹಿನ್ನೆಲೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆಯುವ ವೇಳೆ "ಮುಖ್ಯಮಂತ್ರಿ ಆಗಲಿ' ಎಂದು ಆಶೀರ್ವದಿಸುವಂತೆ ಶಾಸಕ ಬಿ.ಸುರೇಶಗೌಡ ಹೇಳಿದ್ದು ಸಂಚಲನ ಸೃಷ್ಟಿಸಿತು.

ಕಾಂಗ್ರೆಸ್​ನಲ್ಲಿ ಇದ್ದಿದ್ದರೆ ಸಿಎಂ ಆಗುತ್ತಿದ್ದೆ ಎಂಬ ಆಸೆ ಸೋಮಣ್ಣ ಅವರಿಗಿತ್ತು. ಬಿಜೆಪಿಗೆ ಬಂದು ಅವಕಾಶ ತಪ್ಪಿತು ಎಂಬ ಕೊರಗು ಇದೆ. ಅದಕ್ಕಾಗಿ ಗುರುಗಳ ಆಶೀರ್ವಾದ ಬೇಕಿದೆ ಎಂದರು. ಹಣೆಬರಹದಲ್ಲಿ ಇದ್ದರೆ ಆ ಸ್ಥಾನಕ್ಕೇರುತ್ತಾರೆ ಎಂದು ಶ್ರೀಗಳು ಆಶೀರ್ವದಿಸಿದರು.

ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ 74ನೇ ಜನ್ಮದಿನ ಅಂಗವಾಗಿ ಪತ್ನಿ ಶೈಲಜಾ ಸಮೇತ ಸಿದ್ದಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net