ಉಪ್ಪಿನಬೆಟಗೇರಿ ಗ್ರಾಮದಲ್ಲಿನ ನೀರಿನ ಸಮಸ್ಯೆ ಪರಿಹರಿಸಿ

03 upbr 1-water manavi patra
Published on

ಉಪ್ಪಿನಬೆಟಗೇರಿ: ಗ್ರಾಮದಲ್ಲಿನ ಕುಡಿಯುವ ಮತ್ತು ದಿನ ಬಳಕೆ ನೀರಿನ ಸಮಸ್ಯೆ ಪರಿಹರಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಉಪ್ಪಿನಬೆಟಗೇರಿ ಗ್ರಾಪಂ ಆಡಳಿತ ಮಂಡಳಿ ಹಾಗೂ ಗ್ರಾಮದ ಹಿರಿಯರು ಧಾರವಾಡದ ಜಿಪಂ ಕಚೇರಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು.


ಕಳೆದ ನಾಲ್ಕೈದು ತಿಂಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಜನ, ಜಾನುವಾರುಗಳಿಗೆ ಸಮಸ್ಯೆಯಾಗಿದೆ. ಅಲ್ಲದೆ, ಕುಡಿಯುವ ನೀರಿಗೆ ಸಂಬಂಧಿಸಿದ ಗುತ್ತಿಗೆದಾರ ಬೇಜವಾಬ್ದಾರಿತನ ತೋರುತ್ತಿದ್ದು, ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಆತನ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಬಗ್ಗೆ ನಿಷ್ಕಾಳಜಿ ಮಾಡದೆ, ಸ್ಪಂದಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯ, ಅದು ಬಿಟ್ಟು ಅಸಮಂಜವಾದ ಕಾರಣ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದು.

ಮಲಪ್ರಭಾ ನದಿ ನೀರಿನ ಪೂರೈಕೆ ಹೊಣೆ ಹೊತ್ತಿರುವ ಗುತ್ತಿಗೆದಾರನನ್ನು ಕೂಡಲೆ ಬದಲಾಯಿಸಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಆರ್.ಎಂ. ಸೊಪ್ಪಿನಮಠ ಹಾಗೂ ಪ್ರವೀಣ ಬಿರಾದಾರ ಅವರು ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಗ್ರಾಪಂ ಅಧ್ಯಕ್ಷೆ ಸಾಯೀರಾಬಾನು ಲಾಲ್ಮೀಯಾ, ಉಪಾಧ್ಯಕ್ಷೆ ವಿದ್ಯಾ ಲೋಲಿ, ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಚನ್ನಬಸಪ್ಪ ಮಸೂತಿ, ಮಂಜುನಾಥ ಸಂಕಣ್ಣವರ, ಮಲ್ಲಣ್ಣ ಅಷ್ಟಗಿ, ಕಲ್ಲಪ್ಪ ಪ್ಡುಕಲಕಟ್ಟಿ, ಬಾಬಾ ಮೋಹಿನುದ್ದೀನ್ ಚೌಧರಿ, ಶಿವಪ್ಪ ವಿಜಾಪೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net