3 ತಿಂಗಳಲ್ಲಿ ಸಮಸ್ಯೆಗಳಿಗೆ ಪರಿಹಾರ

ಬಾಗೇಪಲ್ಲಿ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು. ಅಧ್ಯಕ್ಷ ಎ. ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾ ಮತ್ತಿತರರು ಇದ್ದರು.
1
ಬಾಗೇಪಲ್ಲಿ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು. ಅಧ್ಯಕ್ಷ ಎ. ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾ ಮತ್ತಿತರರು ಇದ್ದರು.
Published on

ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ



ಬಾಗೇಪಲ್ಲಿ: ಪಟ್ಟಣದ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ, ಇ-ಖಾತೆ, ಉಚಿತ ನಿವೇಶನ ವಿತರಣೆ, ಒಳಚರಂಡಿ ಕಾಮಗಾರಿ ಸಮಸ್ಯೆಗಳಿಗೆ ಮೂರು ತಿಂಗಳಲ್ಲಿ ಪರಿಹಾರ ಕಲ್ಪಿಸಿ, ಮುಂದಿನ ಸಭೆಯಲ್ಲಿ ಪ್ರಗತಿಯ ವರದಿ ಸಲ್ಲಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮನೆಗಳಿಗೆ ನಲ್ಲಿ ನೀರು ಸರಬರಾಜು ಯೋಜನೆ ಅನುಮೋದನೆ, ಒಳಚರಂಡಿ ಕಾಮಗಾರಿ ವಿಳಂಬ, ತೆರಿಗೆ ವಸೂಲಾತಿ, ್ಲೆಕ್ಸ್ ಅಳವಡಿಕೆ ಹಾಗೂ ಪ್ಲಾಸ್ಟಿಕ್ ಮಾರಾಟ ನಿಷೇಧ, ವಿದ್ಯುತ್ ಕಂಬಗಳ ತೆರವು, ಡ್ಯಾಂ ನೀರು ಸರಬರಾಜು ಮಾಡುವ ವಿಚಾರ, ಸ್ವಚ್ಛತೆ ಹಾಗೂ ಘಂಟಂವಾರಪಲ್ಲಿ, ಪರಗೋಡು ಗ್ರಾಪಂ ವ್ಯಾಪ್ತಿಯಲ್ಲಿರುವ ಪುರಸಭೆ ಆಸ್ತಿ ವಹಿಗಳನ್ನು ವರ್ಗಾಯಿಸುವ ವಿಚಾರವಾಗಿ ಪುರಸಭೆ ಅಧಿಕಾರಿಗಳ ಹಾಗೂ ಸದಸ್ಯರ ನಡುವೆ ಮಾತಿನ ಸಮರವೇ ನಡೆಯಿತು. ಕೊನೆಗೆ ಶಾಸಕರು ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಭರವಸೆ ನೀಡಿದರು.
ಪುರಸಭೆ ಸದಸ್ಯ ಶ್ರೀನಿವಾಸರೆಡ್ಡಿ ಮಾತನಾಡಿ, ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ ಸುಂಕ ವಸೂಲಿ ಮಾಡಬೇಕು, ುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಕೊಡಬೇಕು. ತೆರಿಗೆ ವಸೂಲಾತಿ ಪ್ರಮಾಣವನ್ನು ದುಪ್ಪಟ್ಟು ಮಾಡಿ ಅಭಿವೃದ್ಧಿ ಕೆಲಸಗಳಿಗೆ ಮುಂದಾಗಬೇಕಾಗಿದೆ. ವಾಣಿಜ್ಯ ಕಟ್ಟಡಗಳ ಬಾಕಿ ತೆರಿಗೆ ವಸೂಲಾತಿಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸರ್ವ ಸದಸ್ಯರು ಒಪ್ಪಿಗೆ ಸೂಚಿದರೆ ಕ್ರಮ ಜರುಗಿಸಿ ನಿಯಮ ಪಾಲಿಸಲು ಸಿದ್ಧ ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿ ಒಪ್ಪಿಗೆ ಪಡೆದರು.
ಒಳಚರಂಡಿ ಕಾಮಗಾರಿಗೆ ₹13 ಕೋಟಿ ಬೇಕು: ಬಾಗೇಪಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪ್ರಾರಂಭಗೊಂಡು 13 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ 13 ಕೋಟಿ ರೂ. ಅನುದಾನ ಕೊಟ್ಟರೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ ಎಂದು ಒಳಚರಂಡಿ ಮಂಡಳಿ ಅಧಿಕಾರಿ ಆರ್.ಲತಾ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಅಸಂಪೂರ್ಣ ಒಳಚರಂಡಿ ಕಾಮಗಾರಿಯಿಂದ ಜನ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಗೆ ವಿವರಿಸಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಶಾಸಕರಲ್ಲಿ ಮನವಿ ಮಾಡಿದ ಪ್ರಸಂಗ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ನರಸಿಂಹನಾಯ್ಡು, ಸದಸ್ಯರಾದ ಕೆ.ಎ.ಶ್ರೀನಾಥ್, ಅಶೋಕರೆಡ್ಡಿ, ಎ.ನಂಜುಂಡ, ಜಬೀವುಲ್ಲಾ, ಪಿ.ವಿ.ಮಧುಸೂದನರೆಡ್ಡಿ, ಆ.ನ.ಮೂರ್ತಿ, ವನಿತಾದೇವಿ, ಗುಲ್ನಾಜ್‌ಬೇಗಂ, ಶಭಾನಾ, ನಿಸಾರ್, ಸುನಿತಾ ರಮೇಶ್, ಪದ್ಮ ಮತ್ತಿತರರು ಇದ್ದರು.

ಕೇಂದ್ರದಿಂದ 12 ಕೋಟಿ ರೂ. ಅನುದಾನ
ಬಾಗೇಪಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿರುವ ಪ್ರತಿ ಮನೆಗೂ ಕುಡಿಯುವ ನೀರಿನ ನಳಿ ಸಂಪರ್ಕ ಕಲ್ಪಿಸುವ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿ ಎರಡು ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯ ಮನೆ ಮನೆಗೆ ನಳಿ ಸಂಪರ್ಕಕ್ಕೆ 12 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಅನುಷ್ಠಾನಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪಿಡಿಒಗಳ ವಿರುದ್ಧ ಕ್ರಮಕ್ಕೆ ಸೂಚನೆ
ಸದಸ್ಯ ಎಸ್‌ಟಿಡಿ ಮೂರ್ತಿ ಮಾತನಾಡಿ, ಪಟ್ಟಣದ 1, 5, 6, 7, 8, 9, 16ನೇ ವಾರ್ಡ್‌ಗಳಲ್ಲಿರುವ ಪುರಸಭೆ ವ್ಯಾಪ್ತಿಯ ಆಸ್ತಿಗಳ ದಾಖಲೆಗಳನ್ನು ವರ್ಗಾಯಿಸುವಂತೆ ಜಿಲ್ಲಾಧಿಕಾರಿಗಳು ಅದೇಶ ಮಾಡಿ 10 ವರ್ಷಗಳಾದರೂ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇಂದಿಗೂ ಹಸ್ತಾಂತರ ಮಾಡಿಲ್ಲ. ಇದರಿಂದ ಮೂಲಸೌಕರ್ಯ ಕಲ್ಪಿಸುತ್ತಿರುವ ಪುರಸಭೆಗೆ ನಷ್ಟ ಸಂಭವಿಸುತ್ತಿದೆ. ಆಸ್ತಿಗಳ ಹಸ್ತಾಂತರ ಯಾವಾಗ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ತಕ್ಷಣವೇ ಶಾಸಕರು ತಾಪಂ ಇಒ ರಮೇಶ್ ಅವರನ್ನು ಸಭೆಗೆ ಕರೆಯಿಸಿ ಸರ್ಕಾರದ ಅದೇಶದಂತೆ ಪಿಡಿಒಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಆಸ್ತಿ ವಹಿಗಳನ್ನು ಪುರಸಭೆಗೆ ವರ್ಗಾಯಿಸುವಂತೆ ಗಡುವು ನೀಡಿ ನಿರ್ದೇಶಿಸಿದರು.

ವಿಜಯವಾಣಿ ಪ್ರಕಟಿಸಿದ್ದ ಸುದ್ದಿಯ ಬಗ್ಗೆ ಚರ್ಚೆ

ಸೆ.28ರಂದು ವಿಜಯವಾಣಿ ಪತ್ರಿಕೆಯಲ್ಲಿ ಪುರಸಭೆ ಗಡಿ ರೇಖೆಯೊಳಗಿನ ಆಸ್ತಿ ವಹಿಗಳನ್ನು ವರ್ಗಾಯಿಸುವಲ್ಲಿ ಪುರಸಭೆ ಮತ್ತು ಗ್ರಾಪಂಗಳಲ್ಲಿ ನಿರ್ಮಾಣಗೊಂಡಿದ್ದ ಗೊಂದಲದ ಬಗ್ಗೆ ಗ್ರಾಪಂ ತೆರಿಗೆ ಕಟ್ಟೋರಿಗಿಲ್ಲ ಪುರಸಭೆ ಸೌಲಭ್ಯ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡಿದ್ದ ಸುದ್ದಿಯ ಬಗ್ಗೆ ಹಲವು ಸದಸ್ಯರು ಚರ್ಚಿಸಿದಾಗ, ತಾಪಂ ಇಒ ಅವರನ್ನು ಸಭೆಗೆ ಕರೆಸಿದ ಶಾಸಕ ಸುಬ್ಬಾರೆಡ್ಡಿ ಸರ್ಕಾರದ ಅದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿರುವ ಗ್ರಾಪಂ ಆಸ್ತಿಗಳನ್ನು 3 ತಿಂಗಳೊಳಗೆ ಪುರಸಭೆಗೆ ವರ್ಗಾವಣೆ ಮಾಡುವಂತೆ ಸೂಚಿಸಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿ ಯಾವುದೇ ಕಾರಣಕ್ಕೂ ್ಲೆಕ್ಸ್ ಅಳವಡಿಕೆಗೆ ಅನುಮತಿ ನೀಡಬಾರದು. ಆಸ್ತಿ ವಹಿ ವರ್ಗಾವಣೆ ಕುರಿತು ಹಾಗೂ ಬೀದಿ ವ್ಯಾಪಾರಿಗಳಿಂದ ುಟ್‌ಪಾತ್ ಒತ್ತುವರಿ, ಅಡ್ಡಾದಿಡ್ಡಿ ವಾಹನ್ ನಿಲುಗಡೆ ಬಗ್ಗೆ ಪುರಸಭೆ ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಬೇಕು. ಮೂರು ತಿಂಗಳಲ್ಲಿ ನಿವೇಶನ ರಹಿತರಿಗೆ ಸೈಟು ಹಂಚಿಕೆ ಮಾಡಲಾಗುವುದು. ಪಟ್ಟಣದ ಸ್ವಚ್ಛತೆ, ಅತಿ ಶೀಘ್ರದಲ್ಲೇ ಪುರಸಭೆ ಕಚೇರಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಲಾಗುವುದು. ಪುರಸಭೆ ಸದಸ್ಯರು ರಾಜಕೀಯ ಬದಿಗೊತ್ತಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು.
-ಸುಬ್ಬಾರೆಡ್ಡಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net