ಸೋಲೂರು ನೆಲಮಂಗಲಕ್ಕೆ ಸೇರಲು ಬಿಡಲ್ಲ

19 RMN-MGD P2
Published on

* ವಕೀಲರ ಸಭೆಯಲ್ಲಿ ತಾಲೂಕು ವಕೀಲರ ಸಂದ ಅಧ್ಯಕ್ಷ ಆರ್​. ಸುರೇಶ್​ ಹೇಳಿಕೆ >

ಮಾಗಡಿ

ಸೋಲೂರು ಹೋಬಳಿ ನೆಲಮಂಗಲ ಕ್ಷೇತ್ರಕ್ಕೆ ಸೇರಲು ಬಿಡುವುದಿಲ್ಲ ಎಂದು ತಾಲೂಕು ವಕೀಲರ ಸಂದ ಅಧ್ಯಕ್ಷ ಆರ್​. ಸುರೇಶ್​ ಹೇಳಿದರು.

ಪಟ್ಟಣದ ತಾಲೂಕು ವಕೀಲರ ಸಂದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಕೀಲರ ಸಭೆಯಲ್ಲಿ ಮಾತನಾಡಿ, ಮಾಗಡಿ ತಾಲೂಕು ಹುಟ್ಟಿದಾಗಿನಿಂದಲ್ಲೂ ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲಿದೆ. ಈಗ ಸೋಲೂರು ಹೋಬಳಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲು ಮುಂದಾಗಿರುವುದಕ್ಕೆ ತಾಲೂಕು ವಕೀಲರ ವಿರೋಧವಿದೆ.

ತಾಲೂಕಿನಿಂದ ಒಂದೊಂದೆ ಹೋಬಳಿಗಳು ಕಿತ್ತುಕೊಂಡು ಹೋದರೆ ಮುಂದೆ ಮಾಗಡಿ ತಾಲೂಕು ಕಣ್ಮರೆಯಾಗುತ್ತದೆ. ಈ ಹಿಂದೆ ತಾವರೆಕೆರೆ ಹೋಬಳಿ ಮಾಗಡಿಗೆ ಸೇರಿತ್ತು. ಕಂದಾಯ ಇಲಾಖೆಗೆ ಸೇರಿದ ಎಲ್ಲವನ್ನು ಬೆಂಗಳೂರಿಗೆ ನೀಡಿರುವುದರಿಂದ ನ್ಯಾಯಾಂಗದ ವ್ಯಾಪ್ತಿ ಮಾತ್ರ ಮಾಗಡಿ ಸೇರಿದೆ ಎಂದರು.

ಮಾಗಡಿಯಿಂದ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದರೆ ಕಂದಾಯ ಇಲಾಖೆಯೂ ಅರ್ಧ ನೆಲಮಂಗಲಕ್ಕೆ ಹೋದರೆ ವಕೀಲರಿಗೆ ಕೆಲಸ ಇರುವುದಿಲ್ಲ. ಕೂಟಗಲ್ಲು, ಬಿಡದಿ ಹೋಬಳಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದರು ಈ ವ್ಯಾಪ್ತಿಯ ಕಂದಾಯ ಇಲಾಖೆ ವ್ಯಾಪ್ತಿ ರಾಮನಗರಕ್ಕೆ ನೀಡಿದ್ದಾರೆ. ಇದರಿಂದ ಸಮಸ್ಯೆ ಉಂಟಾಗಿದೆ. ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಿಂದ ತೆಗೆದು ನೆಲಮಂಗಲಕ್ಕೆ ಸೇರಿಸುವ ನಿರ್ಧಾರವನ್ನು ಕೈಬಿಡಬೇಕು, ಇಲ್ಲದಿದ್ದರೆ ತಾಲೂಕು ವಕೀಲ ಸಂದಿಂದ ತೀವ್ರವಾಗಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ತಾಲೂಕು ವಕೀಲರ ಸಂದ ಮಾಜಿ ಅಧ್ಯಕ್ಷ ಜಿ.ಪಾಪಣ್ಣ ಮಾತನಾಡಿ, ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ನ್ಯಾಷನಲ್​ ಹೈವೆ ರಸ್ತೆ ಹಾದುಹೋಗಿದೆ. ಅಲ್ಲಿನ ಸುಮಾರು ಶೇ.40 ಪ್ರಕರಣಗಳು ಮಾಗಡಿ ನ್ಯಾಯಾಲಯಕ್ಕೆ ಬರುತ್ತಿದೆ. ಸುಮಾರು 160 ಮಂದಿ ವಕೀಲರಿದ್ದು, ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದರೆ ಸೋಲೂರಿನ ಪ್ರಕರಣಗಳು ಹೋಗಲಿವೆ. ಇದರಿಂದ ವಕೀಲರಿಗೆ ತೊಂದರೆ ಉಂಟಾಗುವುದಲ್ಲದೆ, ಬಾಣವಾಡಿ ಮಾಗಡಿಗೆ 13 ಕಿ. ಮೀ. ಇರುವುದರಿಂದ ಮಾಗಡಿಯಲ್ಲೆ ಉಳಿಸಿದರೆ ನಾಗರೀಕರಿಗೆ ಅನುಕೂಲವಾಗುತ್ತದೆ.

ನೆಲಮಂಗಲಕ್ಕೆ ಸೇರಿಸುವ ಅಗತ್ಯತೆ ಇಲ್ಲ. ನೆಲಮಂಗಲಕ್ಕೆ ಸೇರಿಸಿದರೆ ಕದಾರರಿಗೆ ತೊಂದರೆ ಉಂಟಾಗುತ್ತದೆ, ಎಷ್ಟೇ ಕಷ್ಟ ಬಂದರೂ ನೆಲಮಂಗಲಕ್ಕೆ ಬಿಡುವುದಿಲ್ಲ. ಈ ಬಗ್ಗೆ ಈಗಾಗಲೇ ಸಂಸದ ಡಾ.ಸಿ.ಎನ್​. ಮಂಜುನಾಥ್​, ಶಾಸಕ ಎಚ್​.ಸಿ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಎಂ.ಎಚ್​.ವಿಜಯ್​ ಕುಮಾರ್​, ಪ್ರಕಾಶ್​, ನಾರಾಯಣಸ್ವಾಮಿ, ಎಂ. ಚೇತನ್​, ಭಾರತಿ, ರಮ್ಯಾ, ಎ. ನರಸಿಂಹಮೂರ್ತಿ, ನವೀನ್​ ಕುಮಾರ್​, ಸಿದ್ದರಾಜು, ಸಿದ್ದಲಿಂಗಪ್ಪ, ರವೀಂದ್ರ ಕುಮಾರ್​, ಚನ್ನಕೇಶವ, ಕಿರಣ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net