ಯಕ್ಷಗಾನ ಕರಾವಳಿ ಜನರ ನಾಡಿಮಿಡಿತ: ಕೃಷ್ಣಮೂರ್ತಿ ಉರಾಳ ಅಭಿಮತ ; ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ

yakshagana
ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ನಡೆಯಿತು
Published on

ಕೋಟ: ಯಕ್ಷಗಾನ ಕರಾವಳಿ ಭಾಗದ ಸಾಂಸ್ಕೃತಿಕ ರಾಯಭಾರಿ ಮಾತ್ರವಲ್ಲದೇ ಇಲ್ಲಿನ ಜನರ ನಾಡಿಮಿಡಿತ. ಕನ್ನಡ ಭಾಷೆಯ ಗಟ್ಟಿತನ ಯಕ್ಷಗಾನದಲ್ಲಿ ನಾವು ನೋಡಬಹುದು ಎಂದು ಚಿಂತಕ ಕೃಷ್ಣಮೂರ್ತಿ ಉರಾಳ ಹೇಳಿದರು. ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಪಂ ಆಸರೆಯಲ್ಲಿ ತಿಂಗಳ ಸಾಹಿತ್ಯಿಕ-ಸಾಂಸ್ಕೃತಿಕ ಸಮಾರಂಭ ಏಕವ್ಯಕ್ತಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಯಕ್ಷ ಸಾಹಿತಿ ಪಿ.ವಿ.ಆನಂದ್, ಹಿಮ್ಮೇಳ ಸಂಯೋಜಕ ವೆಂಕಟೇಶ್ ವೈದ್ಯ,ಪ್ರಸಾದ್ ರಾವ್ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net