ಯೋಧರ ಕೊಡುಗೆ ಸ್ಮರಿಸುವುದು ಕರ್ತವ್ಯ

IMG-20240728-WA0054
Published on

ಬೇಲೂರು: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ದೇಶಭಕ್ತರ ಬಳಗದಿಂದ ಪಟ್ಣದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಹರಿದಾಸ್ ಪಾಂಡು ಅವರನ್ನು ಸನ್ಮಾನಿಸಲಾಯಿತು.


ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರು, ದೇಶದ ಒಳಿತಿಗಾಗಿ ವೀರ ಮರಣ ಹೊಂದಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಜನ್ಮ ಕೊಟ್ಟ ತಾಯಿ, ತಂದೆ, ಅಕ್ಷರ ಕಲಿಸಿದ ಗುರು, ದೇಶ ರಕ್ಷಣೆ ಮಾಡುವ ಯೋಧರನ್ನು ಎಂದಿಗೂ ಮರೆಯಬಾರದು. ಹಾಗಾಗಿ ನಾವು ಪ್ರತಿ ವರ್ಷವೂ ಕಾರ್ಗಿಲ್ ವಿಜಯೋತ್ಸವ ಸಂದರ್ಭ ನಿವೃತ್ತ ಯೋಧರನ್ನು ಸನ್ಮಾನಿಸುತ್ತಿದ್ದೇವೆ ಎಂದರು.


ಬಳಗದ ಕಾರ್ಯದರ್ಶಿ ಮಹೇಶ್ ಮಾತನಾಡಿ, ಕಾರ್ಗಿಲ್ ವಿಜಯೋತ್ಸವಕ್ಕೆ ಕಾರಣ ಸೈನಿಕರನ್ನು ಮರೆಯುವಂತಿಲ್ಲ ಎಂದರು. ಬಳಗದ ಖಜಾಂಚಿ ಪ್ರಕಾಶ್, ಮಂಜುನಾಥ್, ರೋಟರಿ ಸಂಸ್ಥೆ ಅಧ್ಯಕ್ಷ ಶಂಭುಗೌಡ, ಉಪನ್ಯಾಸಕ ಆರ್.ಎಸ್.ಮಹೇಶ್, ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net