ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಸೌಲ ಸೌಲಭ್ಯ

6KMD-1
ಕೆ.ಎಂ.ದೊಡ್ಡಿಯ ಅಂಬೇಡ್ಕರ್ ಭವನದಲ್ಲಿ ಶ್ರೀವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಷೇರುದಾರರ ಮಕ್ಕಳಿಗೆ ಅಭಿನಂದಿಸಲಾಯಿತು.
Published on

ಕೆ.ಎಂ.ದೊಡ್ಡಿ: ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಸಾಲ-ಸೌಲಭ್ಯಗಳನ್ನು ನೀಡಲು ಸಂಘ ತೀರ್ಮಾನಿಸಲಾಗಿದೆ ಎಂದು ಶ್ರೀ ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಕ್ಯಾತಘಟ್ಟ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶ್ರೀ ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ವಹಿವಾಟನ್ನು ಮತ್ತಷ್ಟು ವೃದ್ಧಿಗೊಳಿಸಲು ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಲು ಮುಂದಾಗಿದ್ದೆವೆ ಎಂದರು.

ಸಂಘವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಷೇರುದಾರರ ಸಹಕಾರ ಅಗತ್ಯವಾಗಿದ್ದು, ಮತ್ತಷ್ಟು ಷೇರುದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಜತೆಗೆ ಎಫ್‌ಡಿ, ಆರ್‌ಡಿ ಸಂಗ್ರಹಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

2024-2025 ನೇ ಸಾಲಿನಲ್ಲಿ 3.34 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ವರ್ಷದಲ್ಲಿ ಮತ್ತಷ್ಟು ಹೆಚ್ಚು ಲಾಭ ಗಳಿಸಬೇಕಾದರೆ ಷೇರುದಾರರು ಆಡಳಿತ ಮಂಡಳಿಗೆ ಸಹಕಾರ ನೀಡಬೇಕು. ಹೆಚ್ಚು ಷೇರುಗಳನ್ನು ಕಟ್ಟಿ ಉಳಿತಾಯ ಖಾತೆಯನ್ನು ತೆರೆಯಬೇಕೆಂದು ಮನವಿ ಮಾಡಿದರು.

ಸಂಘದ ವತಿಯಿಂದ ಶೀಘ್ರದಲ್ಲೆ ಇ-ಸ್ಟಾೃಂಪ್ ಸೌಲಭ್ಯವನ್ನು ನೀಡಲು ಮುಂದಾಗಿದ್ದು, ಸಂಘದ ವತಿಯಿಂದ ಹಲವು ಹೊಸ ಯೋಜನೆಗಳನ್ನು ರೂಪಿಸುವ ಜತೆಗೆ ಪಿಗ್ಮಿದಾರರಿಗೆ ಸಾಲ ನೀಡುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಮತ್ತು ಹೆಚ್ಚು ಪಿಗ್ಮಿ ಹಣವನ್ನು ಕಟ್ಟಿದ ಷೇರುದಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಬಿ.ಎಸ್. ಜ್ಯೋತಿ, ನಿರ್ದೇಶಕರಾದ ಎಲ್‌ಐಸಿ ಶಿವಣ್ಣ, ಅಣ್ಣೂರು ದೇವರಾಜು, ಸುಣ್ಣದದೊಡ್ಡಿ ಮಹೇಶ್, ಜಿ.ಎಸ್.ಲೋಕೇಶ್, ಆರ್.ಕೆ.ಚಂದ್ರಶೇಕರ್, ಸಿ.ಬಿ.ಪ್ರಕಾಶ್, ಭಾವಾನಿ, ಕೃಷ್ಣ, ಎಚ್.ಪಿ.ಸಿದ್ದಾಚಾರಿ, ಸೀನ, ಕೆ.ಎಸ್.ರಾಜೇಶ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪವಿತ್ರಾ, ಸಿಬ್ಬಂದಿ ನಯನಾ, ಕಿರಣ್ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net