ನಿಟ್ಪೂರು ಗ್ರಾಪಂನಲ್ಲಿ ಮಣ್ಣು ಪರೀಕ್ಷೆ ಅಭಿಯಾನ

13 gkp 08
Published on

ಗೋಣಿಕೊಪ್ಪ: ನಿಟ್ಪೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇಗ್ಗುತಪ್ಪ ಸಂಘ, ಗೋಣಿಕೊಪ್ಪ ಕಾಫಿ ಮಂಡಳಿ ಆಶ್ರಯದಲ್ಲಿ ಮಂಗಳವಾರ ಮಣ್ಣು ಪರೀಕ್ಷಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.


ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಪುಲಾ ಕುಮಾರಿ ಮಣ್ಣು ಪರೀಕ್ಷೆಯ ಮಹತ್ವ, ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಿರಿಯ ಸಂಪರ್ಕ ಅಧಿಕಾರಿಗಳಾದ ಮುಖಾರಿಬ್ ಕಾಫಿ ಕಪಾತು ಮಾಡುವುದು, ಕಾಫಿ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣ, ಸುಣ್ಣ ಮತ್ತು ಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.


ಇಗ್ಗುತಪ್ಪ ಸಂಘದ ಅಧ್ಯಕ್ಷ ಮುಕ್ಕಾಟಿರ ಫ್ರಿನ್ಸ್ ಪೊನ್ನಪ್ಪ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಇಗ್ಗುತಪ್ಪ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪೊರಂಗಡ ಪವನ್ ಚಿಟ್ಟಿಯಪ್ಪ, ಇಗ್ಗುತಪ್ಪ ಸಂಘದ ಪ್ರಮುಖರಾದ ಕಾಟಿಮಾಡ ಶಿವಪ್ಪ, ಹೊಟ್ಟೇಂಗಡ ಅಜಿತ್, ಕಾಟಿಮಾಡ ಸುಜನ್ ಉತ್ತಪ್ಪ, ಪೊನ್ನಿಮಾಡ ನಂಜಪ್ಪ, ತಿರುನೆಲ್ಲಿಮಾಡ ಪೂಣಚ್ಚ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net