ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆಯಲು ಹೋದ ಯುವಕರಿಬ್ಬರು ಜೀವಂತ ಸಮಾಧಿ!

crime
Published on

ಚಿಕ್ಕೋಡಿ: ಗುಡ್ಡದಲ್ಲಿ ಮಣ್ಣು ತೆಗೆಯಲು ಹೋದ ಯುವಕರಿಬ್ಬರು ಜೀವಂತ ಸಮಾಧಿಯಾದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೊರನೊಳ್ಳಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಹಾಲಪ್ಪ ಗುರವ್(24) ಮತ್ತು ಯಲ್ಲಪ್ಪ ಹರಿಜನ(20) ಮೃತರು. ಇವರಿಬ್ಬರೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲು ಹೋಗಿದ್ದರು. ಈ ವೇಳೆ ಗುಡ್ಡ ಕುಸಿದು ಸ್ಥಳದಲ್ಲೇ ಇವರಿಬ್ಬರೂ ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ಕಾಲೇಜು ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್​ ವಿದ್ಯಾರ್ಥಿ ಆತ್ಮಹತ್ಯೆ!

ಸುಮಾರು 6 ಅಡಿ ಮಣ್ಣಿನ ಕೆಳಗೆ ಯುವಕರಿಬ್ಬರು ಸಿಲುಕಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಯಮಕನಮರಡಿ ಠಾಣೆ ಪೊಲೀಸರು ಮತ್ತು ಸ್ಥಳೀಯರು ನಾಪತ್ತೆಯಾದವ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದಾರೆ. ಹರಸಾಹಸಪಟ್ಟು ಒಬ್ಬರ ಶವವನ್ನು ಹೊರ ತೆಗೆಯಲಾಗಿದೆ. ಮತ್ತೊಬ್ಬ ಯುವಕನ ಮೃತ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಇದಿಷ್ಟು ಬೆಳಗ್ಗೆ 11ರ ವರೆಗಿನ ಮಾಹಿತಿ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net