ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ

28 KAMPLI 01
ಕಂಪ್ಲಿ ಗೃಹರಕ್ಷಕ ದಳದ ಸದಸ್ಯ ಕೆ.ಉಲ್ತಣ್ಣ ಅವರ ಪತ್ನಿ ಕೆ.ಪಾರ್ವತಿಗೆ ಜಿಲ್ಲಾ ಸಮಾದೇಷ್ಟ ಎಮ್ಮಿಗನೂರು ಶೇಖ್‌ಸಾಬ್ ಪರಿಹಾರ ಧನ ಚೆಕ್ ವಿತರಿಸಿದರು. ಘಟಕಾಧಿಕಾರಿ ಕೆ.ಹೊನ್ನೂರವಲಿಸಾಬ್, ಪಿಎಲ್‌ಸಿ ಎಚ್.ಗಿರಿಧರ, ಪ್ರಮುಖರಾದ ಬಿ.ಚಂದ್ರಶೇಖರ್, ಕೆ.ಸುರೇಶ ಇತರರಿದ್ದರು.
Published on

ಕಂಪ್ಲಿ: ಗೃಹ ರಕ್ಷಕದಳದ ಸದಸ್ಯರು ನಿಷ್ಕಾಮ ಕರ್ತವ್ಯದೊಂದಿಗೆ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಬಳ್ಳಾರಿ ರಾಜ್ಯ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಎಮ್ಮಿಗನೂರು ಶೇಖ್‌ಸಾಬ್ ಸಲಹೆ ನೀಡಿದರು.

ಗೃಹ ರಕ್ಷಕ ದಳದ ಸದಸ್ಯ ಕೆ.ಉಲ್ತಣ್ಣ ನಿಧನರಾದ ಹಿನ್ನೆಲೆ ಅವರ ಪತ್ನಿ ಕೆ.ಪಾರ್ವತಿಗೆ ಕೇಂದ್ರ ಕಚೇರಿಯ ಪರಿಹಾರ ಧನ ಚೆಕ್ ಅನ್ನು ಶನಿವಾರ ಕಚೇರಿ ಆವರಣದಲ್ಲಿ ವಿತರಿಸಿ ಮಾತನಾಡಿದರು.

ಗೃಹ ರಕ್ಷಕ ದಳ ಸದಸ್ಯರು ಶಿಸ್ತಿನಿಂದ ವರ್ತಿಸಬೇಕು. ಕರ್ತವ್ಯದಲ್ಲಿ ಅಜಾಗರುಕತೆ ತೋರಬಾರದು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ಪರರಿಗೆ ಆದರ್ಶರಾಗಿ ಜೀವಿಸಬೇಕು ಎಂದರು.

ನಿವೃತ್ತ ಮುಖ್ಯಶಿಕ್ಷಕ ಜಿ.ವೀರೇಶ ಅವರನ್ನು ಗೌರವಿಸಲಾಯಿತು. ಘಟಕಾಧಿಕಾರಿ ಕೆ.ಹೊನ್ನೂರವಲಿಸಾಬ್, ಪಿಎಲ್‌ಸಿ ಎಚ್.ಗಿರಿಧರ, ಪ್ರಮುಖರಾದ ಬಿ.ಚಂದ್ರಶೇಖರ್, ಕೆ.ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net