ಸಮಾಜಕ್ಕೆ ನಿಸ್ವಾರ್ಥದ ಸೇವೆ ಸಲ್ಲಿಸಿ

JUL 15-HRP-01
ಹರಪನಹಳ್ಳಿ ನೌಕರರ ಭವದಲ್ಲಿ ಏರ್ಪಡಿಸಿದ್ದ ಎಸ್‌ಎಫ್‌ಐನ 18ನೇ ತಾಲೂಕು ಸಮ್ಮೇಳನ ಕಾರ್ಯಕ್ರಮವನ್ನು ಪ್ರಗತಿಪರ ಚಿಂತಕ ಇಸ್ಮಾಯಿಲ್ ಎಲಿಗಾರ್ ಉದ್ಘಾಟಿಸಿದರು. ಪ್ರಮುಖರಾದ ರವಿ ಅಧಿಕಾರ್, ಎಲ್.ಜಿ. ಸಮಜುನಾಯ್ಕ, ಡಿ.ರಮನವಲಿ, ಶಿವಾರೆಡ್ಡಿ, ಪವನ್ ಕುಮಾರ್, ವೆಂಕಟೇಶ್, ಮಲ್ಲಿಕಾರ್ಜುನ್, ಲೋಕೇಶ್, ಅಶ್ವಿನಿ, ಚೌಡಮ್ಮ, ತೇಜಸ್ವಿನಿ, ಭೂಮಿಕಾ, ಅಮೂಲ್ಯ ಇತರರಿದ್ದರು.
Published on

ಹರಪನಹಳ್ಳಿ: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು. ವಿದ್ಯಾಭ್ಯಾಸದ ಕಡೆ ಗಮನಹರಿಸಲಿ ಎಂದು ಪ್ರಗತಿಪರ ಚಿಂತಕ ಇಸ್ಮಾಯಿಲ್ ಎಲಿಗಾರ್ ತಿಳಿಸಿದರು.

ಪಟ್ಟಣದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಫ್‌ಐನ 18ನೇ ತಾಲೂಕು ಸಮ್ಮೇಳನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಅಂತಹ ಮಹಾನ್ ನಾಯಕರು ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆಸಲ್ಲಿಸಿದ್ದಾರೆ.

ಮಹನೀಯರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೇ ಅನ್ಯಾಯಕ್ಕೆ ಒಳಗಾದವರಿಗೆ ಒಳಿತು ಮಾಡುವುದನ್ನು ರೂಢಿಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಮಾಡಬೇಕೆಂದರು.

ಎಸ್‌ಎಫ್‌ಐನ ರಾಜ್ಯಾಧ್ಯಕ್ಷ ಅಮರೇಶ್ ಮಾತನಾಡಿ, 371(ಜೆ) ಸೌಲಭ್ಯಕ್ಕಾಗಿ ಕಠಿಣ ಶ್ರಮವಿದೆ. ಅದರ ಬಳಕೆಯನ್ನು ಯುವಪೀಳಿಗೆ ಮಾಡಿಕೊಳ್ಳಬೇಕು. 371(ಜೆ) ವಿಶೇಷ ಮೀಸಲಾತಿ ರದ್ದತಿ ಮತ್ತು ದಾವಣಗೆರೆಗೆ ಹರಪಹಳ್ಳಿಯನ್ನು ಮರು ಸೇರ್ಪಡೆಗೆ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುತ್ತಿರುವುದು ಸರಿಯಲ್ಲ.

ಶಿಕ್ಷಣದ ವ್ಯಾಪಾರಿಕರಣದಿಂದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ನೀಟ್ ಹೆಸರಿನಲ್ಲಿ ವಿವಿಧ ತರಬೇತಿ ಕೇಂದ್ರಗಳ ಹಾವಳಿ ಹೆಚ್ಚುತ್ತಿದ್ದು, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net