

ಕೂಡ್ಲಿಗಿ: ಮಹನೀಯರ ಜಯಂತಿಗಳು ಆಚರಣೆಗೆ ಸೀಮಿತವಾಗದೆ ಅವರ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಇದನ್ನೂ ಓದಿ: ದೇವರ ದಾಸಿಮಯ್ಯ ಜಯಂತಿ ಆಚರಣೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಮ್ ಅವರ 118 ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ತಳ ಸಮುದಾಯದ ಶ್ರೇಯೋಭಿವೃದ್ಧಿಗೆ ಅಡಿಪಾಯ ಹಾಕಿದ ಜಗಜೀವನ್‌ರಾಮ್ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವ ಜತೆ ದಲಿತರನ್ನು ಒಗ್ಗೂಡಿಸಿ ಚಳುವಳಿಯಲ್ಲಿ ತೊಡಗಿಸಿದ್ದರು. ಬಾಬುಜೀ ಕೇವಲ ತಾವು ಬೆಳೆಯವುದಲ್ಲದೇ ಸಮುದಾಯದ ಎಲ್ಲರನ್ನೂ ಬೆಳಸಿದರು.
ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿದರು ಎಂದರು.
ಬಾಬು ಜಗಜೀವನ್‌ರಾಮ್ ಸಂಘದ ತಾಲೂಕು ಅಧ್ಯಕ್ಷ ಸಾಸಲವಾಡ ಶಿವಣ್ಣ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ದಲಿತ ಸಂಘದ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪಿಎಸ್‌ಐ ಸಿ.ಪ್ರಕಾಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ,
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶಾಹೀದಾ ಆಹಮ್ಮದಿ, ಪ್ರಮುಖರಾದ ಬಂಡೆ ರಾಘವೇಂದ್ರ, ಡಿ.ಎಚ್.ದುರುಗೇಶ್, ಎಳನೀರು ಗಂಗಣ್ಣ, ಮಹೇಶ್, ಸಾಲುಮನಿ ರಾಘವೇಂದ್ರ, ಪಪಂ ಸದಸ್ಯರಾದ ಟಿ.ವೆಂಕಟೇಶ, ಕೆ.ಈಶಪ್ಪ, ಸಚಿನ್ ಕುಮಾರ್, ಕಾಟೇರ ಹಾಲೇಶ್, ಸಿದ್ದಪ್ಪ, ಬಸಪ್ಪ, ಪರಶುರಾಮ ಇತರರಿದ್ದರು.