ಸಮಾಜಕ್ಕೆ ಅಬುಲ್ ಕಲಾಂರ ಕೊಡುಗೆ ಅನನ್ಯ

11ALD04
ಅಳವಂಡಿ ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತ ರತ್ನ ಅಬುಲ್ ಕಲಾಂ ಅಜಾದ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು. ಶಿಕ್ಷಕರಾದ ರಾಜಾಸಾಹೇಬ ಬಳಿಗಾರ, ಗಿರಿಯಪ್ಪ ಹಾರನಳ್ಳಿ, ಮರ್ದಾನಲಿ ಗಡಾದ, ಸುನಿತಾ, ಸೌಮ್ಯಾ, ಕುಮಾರಿ, ಶ್ವೇತಾ, ಐಶ್ವರ್ಯ, ಸೋಮಣ್ಣ ಇತರರಿದ್ದರು.
Published on

ಅಳವಂಡಿ: ಅಬುಲ್ ಕಲಾಂ ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಸ್ವಾತಂತ್ರ ಹೋರಾಟಗಾರರಾಗಿ, ಪತ್ರಕರ್ತರಾಗಿ ಸಮಾಜ ಸುಧಾರಣೆಗಾಗಿ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದು ಶಿಕ್ಷಕ ರಾಜಾಸಾಹೇಬ್ ಬಳಿಗಾರ ಹೇಳಿದರು.

ಸಮೀಪದ ಬೆಟಗೇರಿ ಸರ್ಕಾರಿ ಪ್ರೌಡಶಾಲೆಯಲ್ಲಿ ಭಾರತ ರತ್ನ ಅಬುಲ್ ಕಲಾಂ ಅಜಾದ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಶಿಕ್ಷಕ ಗಿರಿಯಪ್ಪ ಹಾರನಳ್ಳಿ ಮಾತನಾಡಿ, ಶಿಕ್ಷಣ ತಜ್ಞ ಅಬುಲ್ ಕಲಾಂ ಅಜಾದ ಅವರು ಗಾಂಧಿಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟು ಅಸಹಕಾರ ಚಳುವಳಿ, ಖಿಲಾಪತ್ ಚಳುವಳಿ, ಭಾರತ ಬಿಟ್ಟು ತೊಲಗಿ ಚಳುವಳಿ ಮುಂತಾದ ಸ್ವಾತಂತ್ರ ಹೋರಾಟ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದಾರೆ.

ಸ್ವತತ್ರ ಭಾರತದ ಪ್ರಥಮ ಶಿಕ್ಷಣಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮಾಜದಲ್ಲಿನ ಬಡತನ, ಅಜ್ಞಾನ, ಮೌಡ್ಯತೆ ತೊಲಗಲು ಶಿಕ್ಷಣ ಅತಿ ಅವಶ್ಯ ಎಂದು ಪ್ರತಿಪಾದಿಸಿದ್ದಾರೆ. ವೀರವನಿತೆ ಓಬವ್ವ ಧೈರ್ಯ ಸಾಹಸದಿಂದ ಹೈದರಾಲಿ ಸೈನವನ್ನು ದುರ್ಗದ ಕೋಟೆಯಲ್ಲಿ ಸದೆ ಪಡೆದು ದೈರ್ಯ ಮೆರೆದಿದ್ದಾಳೆ. ಓಬವ್ವನ ಧೈರ್ಯ ಸಾಹಸ ಇಂದಿನ ಮಹಿಳೆಯರು ಮೈಗೂಡಿಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net