More

  ಮೌಲಾನ ಅಬುಲ್ ಕಲಾಂ ವೃತ್ತ ನಿರ್ಮಿಸಿ

  ಕಂಪ್ಲಿ: ಹೊಸ ಬಸ್ ನಿಲ್ದಾಣ ಬಳಿ ಮೌಲಾನ ಅಬುಲ್ ಕಲಾಂ ವೃತ್ತ ನಿರ್ಮಿಸಿ, ಪುತ್ಥಳಿ ಸ್ಥಾಪಿಸಲು ಪುರಸಭಾಡಳಿತ, ಜನಪ್ರತಿನಿಧಿಗಳು ಜಾಗೃತಿ ತೋರಬೇಕು ಎಂದು ಅಬುಲ್ ಕಲಾಂ ಅಜಾದ್ ಮುಸ್ಲಿಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಐ.ಹೊನ್ನೂರ್‌ಸಾಬ್ ಒತ್ತಾಯಿಸಿದರು.

  ಇದನ್ನೂ ಓದಿ: ಕಾವೇರಿ ನೀರಿನ ಹೋರಾಟಕ್ಕೆ ಕಾನೂನಾತ್ಮಕ ಪರಿಹಾರವೇ ಅಂತಿಮ: ನಿವೃತ್ತ ಐಜಿಪಿ ಸಿ.ಚಂದ್ರಶೇಖರ್ ಸ್ಪಷ್ಟನುಡಿ

  ಪಟ್ಟಣದ ಡಾ.ಮೌಲಾನಾ ಅಬುಲ್ ಕಲಾಂ ಅಜಾದ್ ವೃತ್ತದಲ್ಲಿ ಶನಿವಾರ ಅಬುಲ್ ಕಲಾಂರ 134ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
  ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಡಿಗೇರ ಜಿಲಾನ್‌ಸಾಬ್ ಮಾತನಾಡಿ, ಸ್ವಾತಂತ್ರೃ ಹೋರಾಟದಲ್ಲಿ ಹಿಂದೂ ಮುಸ್ಲಿಂರನ್ನು ಒಗ್ಗೂಡಿಸಿ ಅವರಲ್ಲಿ ಭಾವೈಕ್ಯತೆ, ಸಮಗ್ರತೆ ಮತ್ತು ರಾಷ್ಟ್ರಾಭಿಮಾನ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರೆ ಎಂದರು.

  ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಖಾಜಾವಲಿ, ಸೈಯ್ಯದ್ ರಾಜಾಸಾಬ್, ಎಂ.ರಾಜಭಕ್ಷಿ, ಮೆಹಬೂಬ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಕೆ.ಮಸ್ತಾನ್‌ಸಾಬ್, ಮುಸ್ಲಿಂ ಸಮಾಜದ ಪ್ರಮುಖರಾದ ಎಂ.ವಲಿಅಹ್ಮದ್‌ಸಾಬ್, ಗೆಜ್ಜೆಳ್ಳಿಬಾಷ, ಎನ್.ಯೂನೂಸ್, ಬಡಿಗೇರ ಜಿಲಾನ್‌ಸಾಬ್, ಕೆ.ಮೆಹಬೂಬ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts