More

    ಬದುಕು ಕಟ್ಟಿಕೊಳ್ಳಲು ಶಿಕ್ಷಣವೇ ಆಧಾರ

    ಅಳವಂಡಿ: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ ಹಾಗೂ ಮಕ್ಕಳ ಓದಿಗೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಶ್ರೀಸಿದ್ದೇಶ್ವರ ಮಠದ ಶ್ರೀಮರುಳಾರಾದ್ಯ ಶಿವಾಚಾರ್ಯರ ತಿಳಿಸಿದರು.

    ಇದನ್ನೂ ಓದಿ: ಉರ್ದು ಶಾಲೆಗಳಲ್ಲಿ ಶುಕ್ರವಾರ ಬ್ಯಾಗ್ ರಹಿತ ದಿನಕ್ಕೆ ಶಿಕ್ಷಣ ಇಲಾಖೆ ಸೂಚನೆ

    ಸಮೀಪದ ನಿಲೋಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಎಂಟನೇ ತರಗತಿ ಮಕ್ಕಳ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

    ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಪಾಲಕರ ಹಾಗೂ ಜನಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ. ಶಾಲೆಗಳು ಸಾಧಕರನ್ನು ಗುರುತಿಸುವ ಕೆಲಸ ಮಾಡಬೇಕು. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ, ಪಾಲಕರ ಪಾತ್ರ ಮಹತ್ವದ್ದಾಗಿದೆ, ಬದುಕು ಕಟ್ಟಿಕೊಳ್ಳಲು ಶಿಕ್ಷಣ ಆಧಾರ ಸ್ತಂಬವಾಗಿದೆ. ಇಲ್ಲಿನ ಶಾಲೆಯ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಶಿಕ್ಷಣದ ಅಭಿವೃದ್ದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

    ಯೋಗಪಟು ರೇಷ್ಮಾಬೇಗಂ ವಡ್ಡಟ್ಟಿ ಮಾತನಾಡಿ, ಪ್ರತಿಯೊಬ್ಬರು ಕೆಲಸದ ಒತ್ತಡದ ನಡುವೆ ಯೋಗಕ್ಕೆ ಸಮಯವನ್ನು ಮೀಸಲಿಡಬೇಕು. ಯೋಗ ಮನಸ್ಸಿನಲ್ಲಿನ ಒತ್ತಡ ಕಡಿಮೆ ಮಾಡಿ ಉಲ್ಲಾಸ, ಉತ್ಸಾಹದಿಂದ ಇರುವಂತೆ ಮಾಡುತ್ತದೆ. ಹಾಗೂ ಪಾಲಕರು ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬೆಳೆಸಿಕೊಳ್ಳದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದರು.

    ಗಾಯಕಿ ಮುಂಡರಗಿ ನಯನಾ ಅಳವಂಡಿ ಹಾಡುವ ಮೂಲಕ ರಂಜಿಸಿದರು, ದಾನಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
    ಮುಖ್ಯ ಶಿಕ್ಷಕ ಗುರುರಾಜ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ಪ, ಪ್ರಮುಖರಾದ ಯಲ್ಲಪ್ಪ ಮುಕ್ಕಣ್ಣವರ, ಲಕ್ಷ್ಮಣ, ಮಾರುತಿ,

    ಶ್ರೀಸಿದ್ದೇಶ್ವರ ಮಠದ ಶ್ರೀಮರುಳಾರಾದ್ಯ ಶಿವಾಚಾರ್ಯರ ಆಶೀರ್ವಚನ


    ಹನುಮಪ್ಪ, ಕನಕಮೂರ್ತಿ, ಸಿದ್ದಪ್ಪ, ಕೃಷ್ಣಪ್ಪ, ಅಂದಪ್ಪ, ಜಗದೀಶ, ಹಂಚಿನಾಳಪ್ಪ, ಭೀಮಪ್ಪ, ಈರಪ್ಪ, ಸಣ್ಣಕನಕಪ್ಪ, ಈರಪ್ಪ, ಶರಣಪ್ಪ, ಹೊಳೆಯಪ್ಪ, ಮಂಜುನಾಥ, ಪರಸಪ್ಪ, ಶಿಕ್ಷಕರಾದ ವೆಂಕರಡ್ಡಿ, ಬಸವರಾಜ, ಸಂಗಪ್ಪ, ಮುತ್ತು, ಮಂಜುನಾಥ, ನಾಗಪ್ಪ, ಚನ್ನಪ್ಪ, ಚಂದ್ರಶೇಖರ, ಗಂಗವ್ವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts