More

    ದೃಶ್ಯ ಮಾಧ್ಯಮದಿಂದ ನಾಟಕ ಕಲೆಗೆ ಆಪತ್ತು

    ಸೊರಬ: ಗ್ರಾಮೀಣ ಭಾಗದಲ್ಲಿ ಅನಾದಿಕಾಲದಿಂದಲೂ ಪ್ರದರ್ಶನವಾಗುತ್ತಿದ್ದ ನಾಟಕ ಕಲೆ ಸಿನಿಮಾ, ಧಾರಾವಾಹಿಗಳ ಹಾವಳಿಯಿಂದ ನಶಿಸಿ ಹೋಗುತ್ತಿರುವುದು ಬೇಸರದ ಸಂಗತಿ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
    ಮಂಗಳವಾರ ರಾತ್ರಿ ತಾಲೂಕಿನ ಯಕ್ಷಿ ಗ್ರಾಮದಲ್ಲಿ ಹುಲಿಯಪ್ಪ ಸ್ವಾಮಿಯ ೪ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನಾಟಕ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ ನೃತ್ಯಗಳು ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸಾಂಸ್ಕÈತಿಕ ಚಟುವಟಿಕೆಗಳು. ಅವುಗಳು ದೃಶ್ಯ ಮಾಧ್ಯಮಗಳಿಂದಾಗಿ ಮಹತ್ವ ಕಳೆದುಕೊಳ್ಳುತ್ತಿವೆ. ಇಂದಿನ ಯುವ ಪೀಳಿಗೆ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು. ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವು ಸೃಜನಶೀಲ ಗುಣಗಳನ್ನು ಬೆಳೆಸಿಕೊಳ್ಳುವ ಜತೆಗೆ ಮಕ್ಕಳಲ್ಲೂ ಉತ್ತಮ ಸಂಸ್ಕಾರವನ್ನು ಬಿತ್ತಬೇಕು ಎಂದರು.
    ಪ್ರಗತಿಪರ ಕೃಷಿಕ ಒ.ಬಿ.ರಾಜಶೇಖರ್ ಮಾತನಾಡಿ, ಗ್ರಾಮೀಣ ಜನರ ಬದುಕನ್ನು ನಾಟಕಗಳಲ್ಲಿ ಕಾಣಬಹುದು. ಹಸೆ ಚಿತ್ತಾರ, ಕಸೂತಿ, ಲಾವಣಿ ಹಾಡುವುದು, ಚಿತ್ತಾರ ಬುಟ್ಟಿ ಹೆಣೆಯುವ ಕಲೆಯಲ್ಲಿ ಗ್ರಾಮೀಣ ಮಹಿಳೆಯರು ಮುಂದಿದ್ದರು. ಆದರೆ ಇಂದು ಇಂತಹ ಕಲೆಗಳು ಅಳಿವಿನ ಅಂಚಿನಲ್ಲಿದೆ. ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾದ ನಾಟಕವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
    ಎಪಿಎAಸಿ ಮಾಜಿ ಅಧ್ಯಕ್ಷ ರಾಜಶೇಖರ್, ಜಿ.ಸೋಮಪ್ಪ, ಗುರುರಾಜ್, ಗುತ್ಯಪ್ಪ, ಈಶ್ವರ, ಸೋಮಶೇಖರ್, ಕೃಷ್ಣಪ್ಪ, ಲಕ್ಷ÷್ಮಣ, ಬಸವರಾಜ್, ರಾಮಪ್ಪ, ವಿಠ್ಠಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಬಸಪ್ಪ, ಗಣಪತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts