More

    ಗುರುವಾರ ನಿತ್ಯಸಚಿವ ನಾಟಕ ಪ್ರದರ್ಶನ

    ಶಿವಮೊಗ್ಗ: ಮಂಡ್ಯದ ಜನದನಿ ತಂಡದಿಂದ ಏ.25ರ ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ನಿತ್ಯಸಚಿವ (ಶಿಕ್ಷಣ ಶಿಲ್ಪಿ ಕೆ.ಶಂಕರಗೌಡರ ಬದುಕನ್ನು ಆಧರಿಸಿದ) ನಾಟಕ ಪ್ರದರ್ಶನವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.

    ಇದರಲ್ಲಿ ಒಟ್ಟು 21 ಕಲಾವಿದರು 45 ಪಾತ್ರಗಳನ್ನು ನಿರ್ವಹಿಸಲಿದ್ದಾರೆ. 1.45 ಗಂಟೆ ಅವಧಿಯ ಈ ನಾಟಕವನ್ನು ಪ್ರಮೋದ್ ಶಿಗ್ಗಾಂವ್ ನಿರ್ದೇಶಿಸಿದ್ದು, ಡಾ. ರಾಜಪ್ಪ ದಳವಾಯಿ ರಚಿಸಿದ್ದಾರೆ. ವೈ.ಎಂ.ಹನುಮಂತ ಮಂಡ್ಯ ಸಂಗೀತ ನೀಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನಾಟಕ ವೀಕ್ಷಣೆಗೆ ಉಚಿತ ಪ್ರವೇಶವಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ, ಸಹ್ಯಾದ್ರಿ ರಂಗ ತರಂಗ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಮಲೆನಾಡು ಕೋ-ಆಪರೇಟಿವ್ ಸೊಸೈಟಿ ಸಹಕಾರದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ಶಿಲ್ಪಿ ಎಂದೇ ಜನಮಾನಸದಲ್ಲಿ ಉಳಿದಿರುವ ಶಿಕ್ಷಣ ತಜ್ಞ, ಸಹಕಾರ ಧುರೀಣ, ಸಾಂಸ್ಕೃತಿಕ ಚಿಂತಕ ಮತ್ತು ರಾಜಕಾರಣಿ ಕೆ.ಶಂಕರ ಗೌಡ ಅವರ ಬದುಕು, ಹೋರಾಟ, ಸಾಧನೆಯನ್ನು ಈ ನಾಟಕ ಪ್ರಸ್ತುತಪಡಿಸಲಿದೆ ಎಂದರು.
    ರಂಗಕರ್ಮಿಗಳಾದ ಕಾಂತೇಶ್ ಕದರಮಂಡಲಗಿ, ಬಿ.ಚಂದ್ರೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts