More

    ದೃಶ್ಯ-ಶ್ರವಣ ಮಾಧ್ಯಮದಲ್ಲಿ ಶರಣರ ಜೀವನ ಚರಿತ್ರೆ

    ಬಸವಕಲ್ಯಾಣ: ನೂತನ ಅನುಭವ ಮಂಟಪ ಕಾಮಗಾರಿ ಪ್ರಗತಿಯಲ್ಲಿದ್ದು, ಕಟ್ಟಡದ ಒಳಭಾಗದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರ ವಚನ ಸಾಹಿತ್ಯ ಆಧಾರಿತ ದೃಶ್ಯ ಮತ್ತು ಶ್ರವಣ ಮಾಧ್ಯಮ ಅಳವಡಿಕೆ ಕುರಿತು ಅನುಭವ ಮಂಟಪ ವಚನ ಸಾಹಿತ್ಯ ಸಂಕಲನ ಸಮಿತಿ ಕೆಲ ಸಲಹೆಗಳನ್ನು ನೀಡಿದೆ ಎಂದು ಸಮಿತಿ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ.ಗೊ.ರು. ಚನ್ನಬಸಪ್ಪ ತಿಳಿಸಿದ್ದಾರೆ.

    ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಯೋಜನೆಯಲ್ಲಿ ಪ್ರಸ್ತಾವಿತ ವಚನಗಳು, ಶರಣರ ಜೀವನ ಚರಿತ್ರೆ ಹಾಗೂ ೧೨ನೇ ಶತಮಾನದ ಪ್ರಮುಖ ಘಟನಾವಳಿಗಳನ್ನು ಬಿಂಬಿಸುವ ಕುರಿತು ಬಿಕೆಡಿಬಿ ಕಚೇರಿಯಲ್ಲಿ ನಡೆದ ಮೂರು ದಿನದ ಸಮಿತಿಯ ೫ನೇ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಅನುಭವ ಮಂಟಪ ಒಳಭಾಗದಲ್ಲಿ ಶರಣರ ಜೀವನದ ಪ್ರಮುಖ ಘಟ್ಟಗಳನ್ನು ವಚನಗಳ ಆಧಾರದಲ್ಲಿ ದೃಶ್ಯ ಮತ್ತು ಶ್ರವಣ ಮಾಧ್ಯಮದಲ್ಲಿ ಅಳವಡಿಸುವ ಕುರಿತು ಸಮಿತಿ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ. ವಚನ ಸಾಹಿತ್ಯಕ್ಕೆ ಲೋಪವಾಗದಂತೆ ಪ್ರಸಂಗಗಳನ್ನು ಬಿಂಬಿಸುವ ಸಂಬಂಧ ಆಯ್ಕೆ ಮಾಡಿಕೊಳ್ಳಬೇಕಾದ ವಚನಗಳು, ಘಟನಾವಳಿಗಳ ಕುರಿತು ವ್ಯಾಪಕ ಚರ್ಚೆ ನಡೆದಿದೆ. ಸಮಿತಿ ಎಲ್ಲವನ್ನು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

    ಸಮಿತಿ ಸದಸ್ಯರಾದ ಅರವಿಂದ ಜತ್ತಿ, ರಂಜಾನ್ ದರ್ಗಾ, ವೀರಣ್ಣ ರಾಜೂರ, ಪೂಜ್ಯ ಡಾ.ಗಂಗಾಂಬಿಕಾ ಪಾಟೀಲ್, ವೀರಣ್ಣ ದಂಡೆ, ಕಾಶೀನಾಥ ಅಂಬುಲಗೆ, ಡಾ.ಅಮರನಾಥ ಸೋಲಪುರೆ, ಅನುಭವ ಮಂಟಪದ ಕನ್ಸಲ್‌ಟೆಂಟ್ ಬಾಬಾಸಾಹೇಬ ಗಡ್ಡೆ, ಅಶೋಕ ದೊಮಲೂರ, ಟಿ.ಆರ್. ಚಂದ್ರಶೇಖರ, ಅಶೋಕ ಬರಗುಂಡಿ, ರುದ್ರೇಶ ಚಿತ್ತೂರ, ಜಯಶ್ರೀ ದಂಡೆ, ಬಿಕೆಡಿಬಿ ಅಭಿಯಂತರ ಶಿವಕುಮಾರ ತಳವಾಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts