ಕಲಬುರಗಿ: ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡಲು ಮುಂದಾದ ಯುವಕರಿಬ್ಬರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಅಷ್ಟಕ್ಕೂ ಅವರು ರೀಲ್ಸ್ ಮಾಡುವ ಹಿಡಿದುಕೊಂಡಿರುವ ಪಿಸ್ತೂಲ್ ಅಸಲಿಯಲ್ಲ. ನಕಲಿ ಪಿಸ್ತೂಲ್ ಹಿಡಿದುಕೊಂಡೇ ದೊಡ್ಡ ದೊಡ್ಡ ಡೈಲಾಗ್ ಬಿಟ್ಟ ಈ ಇಬ್ಬರ ವಿರುದ್ಧ ಪೊಲೀಸರು ಕೇಸ್ ಹಾಕಿಯೇಬಿಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಮಹೇಶ್ ಮತ್ತು ಬಸವರಾಜ್ ಎಂಬ ಯುವಕರಿಬ್ಬರು ಸೇರಿಕೊಂಡು ನಕಲಿ ಪಿಸ್ತೂಲ್ ಹಿಡಿದು ರೀಲ್ಸ್ ಹಾಗೂ ಫೋಟೋ ಶೂಟ್ ಮಾಡಿ ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿದ ವಿಡಿಯೋಗಳನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣವೇ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿದ ಆರೋಪದ ಮೇಲೆ ದೂರು ದಾಖಲು ಮಾಡಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಲು ಮುಂದಾದ ಈ ಇಬ್ಬರನ್ನೂ ಠಾಣೆಗೆ ಕರೆಯಿಸಿ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ರೀತಿ ಹುಚ್ಚುಚ್ಚು ರೀಲ್ಸ್ ಮಾಡಿದ್ರೆ ಜೈಲೂಟ ಗ್ಯಾರಂಟಿ ಎಂದು ವಾರ್ನಿಂಗ್ ಕೂಡ ನೀಡಿದ್ದಾರೆ.
ಪಿಸ್ತೂಲ್ ಹಿಡಿಕುಕೊಂಡು ಮಾಡಿದ ಈ ವಿಡಿಯೋ ಭಾರೀ ಡೈಲಾಗ್ ಕೂಡ ಹರಿಬಿಟ್ಟಿದ್ದಾರೆ. ‘ನನ್ನ ವಾರ್ ಭಾರಿ ಡೇಂಜರ್ ಇದೆ.. ನನ್ನ ನೆಕ್ಸ್ಟ್ ಟಾರ್ಗೆಟ್ ನಿಂದು ಇದೆಲೇ…’ ಎಂದು ಡೈಲಾಗ್ ಹೊಡೆದಿದ್ದಾರೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು, ಇವನನ್ನು ಹಿಡಿದು ಜೈಲಿಗೆ ಹಾಕಿ ಎಂದು ಹೇಳಿದ್ಧಾರೆ. ಇದರ ಬೆನ್ನಲ್ಲಿಯೇ ಕೇಸ್ ದಾಖಲಿಸಿಕೊಂಡ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕೈಬಿಟ್ಟಿದ್ದಾರೆ.
ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ… ಇನ್ನು ನಿರ್ಮಾಣ ವೆಚ್ಚ ಅಗ್ಗ..