ಪುರಸ್ಕಾರದಿಂದ ಸಮಾಜ ಸೇವಕರಿಗೆ ಸ್ಫೂರ್ತಿ: ಎ.ಆರ್.ಸುಬ್ಬಯ್ಯಕಟ್ಟೆ ಬಣ್ಣನೆ

Bdk_award
Published on

ಕುಂಬಳೆ: ಪ್ರಶಸ್ತಿ, ಪುರಸ್ಕಾರಗಳು ಸಾಮಾಜಿಕ ಮುಂದಾಳುಗಳಿಗೆ ಸ್ಫೂರ್ತಿ ಹಾಗೂ ಹೆಚ್ಚಿನ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಹೇಳಿದರು.

ಮಂಗಳೂರಿನ ಕಥಾಬಿಂದು ಪ್ರಕಾಶನ, ಉಡುಪಿ ಶ್ರೀಕೃಷ್ಣ ಮಠದ ಗೀತಾ ಗಾಯನೋತ್ಸವ 50 ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಸೋಮವಾರ ಉಪ್ಪಳದಲ್ಲಿ ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟಮ್‌ಗೆ ಸ್ವಗೃಹದಲ್ಲಿ ಪ್ರದಾನಿಸಿ ಮಾತನಾಡಿದರು.

ಮುಂದಾಳು ಅರಿಬೈಲು ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎ.ಶ್ರೀನಾಥ್ ನಿರ್ವಹಿಸಿದರು. ಕಥಾಬಿಂದು ಪ್ರಕಾಶನದ ನಿರ್ದೇಶಕ, ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್ ಪ್ರಶಸ್ತಿ ಪ್ರದಾನ ಮಾಡಿದರು. ಉದ್ಯಮಿ ಉಮೇಶ್ ಶೆಟ್ಟಿ, ಚಂದ್ರಹಾಸ ನಾಯ್ಕ, ರಂಜಿನಿ ನಾಯ್ಕ, ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಮುಂತಾದವರಿದ್ದರು. ಕಸ್ತೂರಿ ಶೆಟ್ಟಿ ಸ್ವಾಗತಿಸಿದರು. ಶ್ರೀಧರ್ ಶೆಟ್ಟಿ ಮುಟ್ಟಂ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net