

ಉಪ್ಪಳ: ಬಾಯಾರು ಕ್ಯಾಂಪ್ಕೊ ಸಂಸ್ಥೆಯಲ್ಲಿ ತಲೆಹೊರೆ ಕಾರ್ಮಿಕನಾಗಿ 30 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಈಶ್ವರ ಕೆ. ಅವರನ್ನು ಸಂಸ್ಥೆಯ ಪರವಾಗಿ ಬೀಳ್ಕೊಡಲಾಯಿತು.
ನಿರ್ದೇಶಕ ಬಾಲಕೃಷ್ಣ ರೈ ಬಾನೊಟ್ಟು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಮುಖ್ಯ ಅತಿಥಿಯಾಗಿದ್ದ್ದರು. ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಎಂ, ಬಾಯಾರು ಶಾಖಾ ಪ್ರಂಬಂಧಕ ರಮೇಶ್ ವೈ, ಹಿರಿಯ ಸದಸ್ಯರಾದ ಕೂವೆತ್ತೋಡಿ ವಿಷ್ಣು ಭಟ್, ನಟರಾಜ್ ಮಾಸ್ತರ್ ಉಪಸ್ಥಿತರಿದ್ದರು.
ಬಾಯಾರು ಶಾಖೆಯ ಸಿಬ್ಬಂದಿ ಕುಮಾರ್ ಬಿ. ಸ್ವಾಗತಿಸಿದರು. ಲೋಕೇಶ್ ಎನ್. ಕಾರ್ಯಕ್ರಮ ನಿರೂಪಿಸಿದರು. ಆದಿತ್ಯ ಆರ್.ಯನ್. ವಂದಿಸಿದರು.